ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶೀಲನೆ ಬಳಿಕ 91 ಅಭ್ಯರ್ಥಿಗಳು ಅಖಾಡದಲ್ಲಿ

ರಂಗೇರಿದ ಚುನಾವಣೆ ಕಣ: ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
Last Updated 26 ಏಪ್ರಿಲ್ 2018, 11:07 IST
ಅಕ್ಷರ ಗಾತ್ರ

ಹಾವೇರಿ: ವಿಧಾನಸಭಾ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಬುಧ ವಾರ ನಡೆದಿದ್ದು, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ 100 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ 9 ತಿರಸ್ಕೃತಗೊಂಡಿವೆ. 91 ಮಂದಿ ಅಖಾಡದಲ್ಲಿ ಉಳಿದಿದ್ದು, ಏ.26 ಮತ್ತು 27ರಂದು ನಾಮಪತ್ರ ಹಿಂಪಡೆಯ ಬಹುದಾಗಿದೆ.

ಆರು ಕ್ಷೇತ್ರಗಳ ಕ್ರಮಬದ್ಧ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ.

ಹಾವೇರಿ ವಿಧಾನ ಸಭಾ ಕ್ಷೇತ್ರ: 1) ನೆಹರು ಓಲೇಕಾರ (ಬಿಜೆಪಿ), 2) ರುದ್ರಪ್ಪ ಲಮಾಣಿ (ಕಾಂಗ್ರೆಸ್), 3) ಡಾ. ಸಂಜಯ ಡಾಂಗೆ (ಜೆಡಿಎಸ್), 4) ಕೆಂಚಮ್ಮ ಹನುಂತಪ್ಪ ನಾಗನೂರ (ಭಾರತೀಯ ಬಹುಜನ ಕ್ರಾಂತಿದಳ), 5) ದುರ್ಗೇಶ್ ಮೇಗಳಮನಿ (ಭಾರತೀಯ ಜನಶಕ್ತಿ ಕಾಂಗ್ರೆಸ್), 6) ಬಸವರಾಜ ಟೀಕೆಹಳ್ಳಿ (ಕೆಜೆಪಿ), 7) ಬಾಬಕ್ಕ ಬಾಲಯ್ಯ ಬಳ್ಳಾರಿ (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ), 8) ರೇಣುಕಾ ಕೆಂಚಳ್ಳನವರ (ಆರ್.ಪಿ.ಐ.–ಎ), 9) ಲಾವತಿ ಚವಾಣ (ಪಕ್ಷೇತರ), 10) ದ್ಯಾಮಪ್ಪ ಶಂಕರ್ ಕಡೇಮನಿ, 11) ದುರುಗಪ್ಪ ಗಾಳೆಪ್ಪ ಮಾದರ, 12) ಪ್ರದೀಪ್ ರಾಮಣ್ಣ ಮಾಳಗಾವಿ (ಪಕ್ಷೇತರ), 13) ಬಸವ ರಾಜ ನಾಗಪ್ಪ ನಾಗಮ್ಮನವರ, 14) ರಾಜೇಶ್ವರಿ ಮುಂದಿನಮನಿ, 15) ಶ್ರೀಪಾದ ಸ್ವಾಮಿ ಡಿ. ಬೆಟಗೇರಿ (ಪಕ್ಷೇತರ).

ಬ್ಯಾಡಗಿ ವಿಧಾನಸಭಾ ಕ್ಷೇತ್ರ: 1) ವಿರೂಪಾಕ್ಷಪ್ಪ ರುದ್ರಪ್ಪ ಬಳ್ಳಾರಿ (ಬಿಜೆಪಿ), 2)ಶಿವನಗೌಡ ರಾಜ ಶೇಖರಗೌಡ ಪಾಟೀಲ (ಕಾಂಗ್ರೆಸ್‌), 3) ಶಿವಬಸಪ್ಪ ಚನ್ನಬಸಪ್ಪ ಬಾಗಮ್ಮ ನವರ (ಬಿಎಸ್‌ಪಿ), 4)ಅಣ್ಣಯ್ಯ ನಾಗಪ್ಪ ಚಾವಡಿ (ಜನ ಸಾಮಾನ್ಯರ ಪಾರ್ಟಿ) 5)ಜಾಕೀರ್ ಹುಸೇನ ಮೌಲಾಲಿ ಅರಳಿಮರದ (ಆಲ್‌ ಇಂಡಿಯಾ ಮಹಿಳಾ ಎಂಪವರ್‌ ಮೆಂಟ್‌ ಪಾರ್ಟಿ), 6)ಶಿವಪ್ಪ ಹಾಲಪ್ಪ ಕಾಡಮ್ಮನವರ(ಜನಹಿತ ಪಕ್ಷ), 7)ಉಮೇಶ ಯಲ್ಲಪ್ಪ ಕರಿ ಗಾರ (ಪಕ್ಷೇತರ), 8)ಗಿರೀಶ ಪುಟ್ಟಪ್ಪ ಬಣಕಾರ (ಪಕ್ಷೇತರ), 9)ಮಹಾಂತಯ್ಯ ಚಂದ್ರಯ್ಯ ಮಠದ (ಪಕ್ಷೇತರ), 10)ರಾಘವೇಂದ್ರ ಮಾರುತಿ ದಾಮೋದರ (ಪಕ್ಷೇತರ), 11)ರುದ್ರಯ್ಯ ಅಂದಾನಯ್ಯ ಸಾಲಿಮಠ (ಪಕ್ಷೇತರ), 12)ಶಿವಮೂರ್ತಿ ಬಸಪ್ಪ ಸಾದರ (ಪಕ್ಷೇತರ).

ಹಿರೇಕೆರೂರ ವಿಧಾನಸಭಾ ಕ್ಷೇತ್ರ: 1) ಯು.ಬಿ.ಬಣಕಾರ (ಬಿಜೆಪಿ), 2) ಬಿ.ಸಿ.ಪಾಟೀಲ (ಕಾಂಗ್ರೆಸ್‌), 3) ಸಿದ್ದಪ್ಪ ಗುಡದಪ್ಪನವರ (ಜೆಡಿಎಸ್), 4) ಮಾದೇವಪ್ಪ ಮಾಳಮ್ಮನವರ (ಎಂಇಪಿ), 5) ವೀರಭದ್ರಪ್ಪ ಕುಂಬಾರ (ಕೆಪಿಜೆಪಿ), 6) ವಿನಯ ಪಾಟೀಲ (ಜನಸಾಮಾನ್ಯರ ಪಕ್ಷ), 7) ಹರೀಶ ಇಂಗಳಗೊಂದಿ (ಕೆಜೆಪಿ), 8) ಪರಮೇಶಪ್ಪ ಕಾಗಿನೆಲ್ಲಿ, 9) ರಾಜಶೇಖರ ದೂದೀಹಳ್ಳಿ, 10) ಮೌಲಾಸಾಬ್ ಹಿತ್ತಲಮನಿ (ಪಕ್ಷೇತರ), 11) ಮಂಜುನಾಥ ಸಾನು (ಪಕ್ಷೇತರ), 12) ಬಸನಗೌಡ ಹನುಮಗೌಡ್ರ (ಪಕ್ಷೇತರ).

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ: 1) ಕೃಷ್ಣಪ್ಪ ಭೀಮಪ್ಪ ಕೋಳಿವಾಡ (ಕಾಂಗ್ರೆಸ್), 2) ಡಾ.ಬಸವರಾಜ ಷಣ್ಮುಖಪ್ಪ ಕೇಲಗಾರ (ಬಿಜೆಪಿ), 3) ಶ್ರೀಪಾದ ಹನುಮಪ್ಪ ಸಾವಕಾರ (ಜೆಡಿಎಸ್‌), 4) ದಿಳ್ಳೆಪ್ಪ ಕೆಂಚಪ್ಪ ಹಿತ್ತಲಮನಿ (ಜನತಾದಳ ಸಂಯುಕ್ತ), 5) ಪರಜಾನ್‌ತಬಾಸುಂ ಶೌಕತಅಲಿ ಕೊಪ್ಪಳ (ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ), 6) ಆರ್.ಶಂಕರ್, ಎಂ. ರಾಮಚಂದ್ರಪ್ಪ (ಕೆಪಿಜೆಪಿ), 7) ಅರುಣಕುಮಾರ ಮಹೇಶ್ವರಪ್ಪ ಗುತ್ತೂರ (ಪಕ್ಷೇತರ), 8) ಚಂದ್ರಶೇಖರ ಮುರಿಗೆಪ್ಪ ಸೊಪ್ಪಿನ (ಪಕ್ಷೇತರ), 9) ಜಗದೀಶ ಯಂಕಪ್ಪ ದೊಡ್ಡಮನಿ (ಪಕ್ಷೇತರ), 10) ಎಸ್. ಧನಲಕ್ಷ್ಮಿ (ಪಕ್ಷೇತರ), 11) ಪುಟ್ಟನಗೌಡ ರಾಮನಗೌಡ ಕುಪ್ಪೇಲೂರ (ಪಕ್ಷೇತರ), 12) ರಾಮಪ್ಪ ಭೀಮಪ್ಪ ಕೋಲಕಾರ (ಪಕ್ಷೇತರ), 13) ರುಕ್ಮಣಿ ಪ್ರಹ್ಲಾದಪ್ಪ ಸಾವಕಾರ (ಪಕ್ಷೇತರ), 14) ವೀರನಗೌಡ ಚನ್ನವೀರಗೌಡ ಪಾಟೀಲ (ಪಕ್ಷೇತರ), 15) ಆರ್.ಶಂಕರ, ಸಿ.ರಾಮಯ್ಯ (ಪಕ್ಷೇತರ), 16) ಶಿವಯೋಗಿಸ್ವಾಮಿ ಗುರುಶಾಂತಸ್ವಾಮಿ ಮಹಾನುಭಾವಿಮಠ (ಪಕ್ಷೇತರ), 17) ಸುನೀಲ ಬಣಕಾರ ಉರ್ಫ ಬಿ.ಎ.ಸುನೀಲ (ಪಕ್ಷೇತರ), 18) ಹನುಮಂತಪ್ಪ ಡಿ. ಕಬ್ಬಾರ (ಪಕ್ಷೇತರ), 19) ಹನುಮಂತರಾಜು ಮಹದೇವಗೌಡ ಚನ್ನಗೌಡ್ರ (ಪಕ್ಷೇತರ).

ಶಿಗ್ಗಾವಿ ವಿಧಾನಸಭಾ ಕ್ಷೇತ್ರ:

1) ಅಶೋಕ ಬೇವಿನಮರ (ಜೆಡಿಎಸ್‌), 2) ಬಸವರಾಜ ಬೊಮ್ಮಾಯಿ (ಬಿಜೆಪಿ), 3) ಸೈಯದ್‌ ಅಜ್ಜಂಪೀರ್‌ ಖಾದ್ರಿ(ಕಾಂಗ್ರೆಸ್‌), 4) ಮೈನೋದಿನ್‌ ಕತೀಬ (ಎಂಇಪಿ), 5) ಹಾತಿವಾಲೆ ಸಿಕಂದರ (ಪ್ರಜಾಪರಿವರ್ತನಾ ಪಾರ್ಟಿ), 6) ಅಬ್ದುಲ್‌ಖಾದರ್ ಕೊಲ್ಲಾಪುರ(ಪಕ್ಷೇತರ), 7) ಶಿವಪ್ಪ ಯಲ್ಲಪ್ಪ ಕಬ್ಬೂರ(ಪಕ್ಷೇತರ), 8) ದುದ್ದುಸಾಬ ಕನವಳ್ಳಿ(ಪಕ್ಷೇತರ), 9) ಮೆಹಬೂಬ ಪಠಾಣ (ಪಕ್ಷೇತರ), 10) ಪರಮೇಶಿ ನಾಗಪ್ಪ ಶೆಟಿಬಾರ (ಪಕ್ಷೇತರ), 11) ಶಿವಾನಂದ ಸೋಮಪ್ಪ ಬಾಗೂರ(ಪಕ್ಷೇತರ), 12) ಸೋಮಣ್ಣ ಬೇವಿನಮರದ (ಪಕ್ಷೇತರ), 13) ಮೋಹನ ಇಟ್ಟಣಗಿ(ಪಕ್ಷೇತರ), 14) ಸುನೀಲ್‌ ಜೆ.ಎ.(ಪಕ್ಷೇತರ).

ಹಾನಗಲ್‌ ವಿಧಾನಸಭಾ ಕ್ಷೇತ್ರ: 1) ಸಿ.ಎಂ.ಉದಾಸಿ (ಬಿಜೆಪಿ), 2) ಶ್ರೀನಿವಾಸ ಮಾನೆ (ಕಾಂಗ್ರೆಸ್‌), 3) ಬಮ್ಮನಹಳ್ಳಿ ಬಾಬು (ಜೆಡಿಎಸ್‌), 4)ನಿಂಗಪ್ಪ ಗಾಳೆಮ್ಮನವರ (ಆರ್‌ಪಿಐ (ಎ)), 5) ಸುಬ್ರಹ್ಮಣ್ಯ ಹೆಬ್ಬಾರ (ಬಿಕೆಬಿಡಿ), 6) ಖ್ವಾಜಾಮೊದ್ಧಿನ್‌ ಅಣ್ಣಿಗೇರಿ (ಪಕ್ಷೇತರ), 7) ಉಡಚಪ್ಪ ಉದ್ದನಕಾಲ (ಪಕ್ಷೇತರ), 8) ಕೃಷ್ಣ ಈಳಿಗೇರ (ಪಕ್ಷೇತರ), 9) ಚಂದ್ರಪ್ಪ ಜಾಲಗಾರ (ಪಕ್ಷೇತರ), 10) ನಜೀರ್‌ಅಹ್ಮದ್‌ ಸವಣೂರ (ಪಿಪಿಪಿ), 11) ಮನೋಹರ್‌ ತಹಸೀಲ್ದಾರ್‌ (ಪಕ್ಷೇತರ), 12) ಮೆಹಬೂಬಅಲಿ ನದಾಫ್‌ (ಪಕ್ಷೇತರ), 13) ಮಹ್ಮದ್‌ಗೌಸ್‌ ಲೋಹಾರ (ಪಕ್ಷೇತರ), 14) ರವಿ ಲಮಾಣಿ (ಪಕ್ಷೇತರ), 15) ರಾಮಪ್ಪ ಬೊಮ್ಮಾಜಿ (ಪಕ್ಷೇತರ), 16) ವೀರೇಶ ಕಿರವಾಡಿ (ಪಕ್ಷೇತರ), 17) ಸಿದ್ದಪ್ಪ ಪೂಜಾರ (ಪಕ್ಷೇತರ), 18) ಹನುಮಂತಪ್ಪ ತಳವಾರ (ಪಕ್ಷೇತರ), 19) ಹೊನ್ನಪ್ಪ ಅಕ್ಕಿವಳ್ಳಿ (ಪಕ್ಷೇತರ).

ತಿರಸ್ಕೃತಗೊಂಡ ನಾಮಪತ್ರ

ಹಾವೇರಿಯಲ್ಲಿ ಶ್ರೀಪಾದಸ್ವಾಮಿ ಬೆಟಗೇರಿ ಹಾಗೂ ಹಾನಗಲ್‌ನಲ್ಲಿ ಮನೋಹರ ತಹಸೀಲ್ದಾರ್ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಲ್ಲಿಸಿದ್ದ ಎರಡನೇ ನಾಮಪತ್ರವು ತಿರಸ್ಕೃತಗೊಂಡಿವೆ. ಪಕ್ಷೇತರರಾಗಿ ಸಲ್ಲಿಸಿದ ನಾಮಪತ್ರ ಸ್ವೀಕೃತಗೊಂಡ ಕಾರಣ, ಅಖಾಡದಲ್ಲಿ ಉಳಿದಿದ್ದಾರೆ. ಅದೇ ರೀತಿ ಆರ್. ಶಂಕರ್ ಸಲ್ಲಿಸಿದ್ದ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಆದರೆ, ಅಖಾಡದಲ್ಲಿದ್ದಾರೆ.

ಉಳಿದಂತೆ ಹಿರೇಕೆರೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಪಕ್ಷದ ಬದಲಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅನ್ನಪೂರ್ಣ ಬಣಕಾರ ಮತ್ತು ನೀಲಮ್ಮ ಸಿದ್ದಪ್ಪ ಗುಡದಪ್ಪನವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಹಾನಗಲ್‌ನಲ್ಲಿ ಪರಸಪ್ಪ ಮಲಕಶೆಟ್ಟಿ, ಜಿಯಾವುಲ್ಲಾ ಮುಲ್ಲಾ ಮತ್ತು ಸುರೇಶ ನಾಯ್ಕ, ಶಿಗ್ಗಾವಿಯಲ್ಲಿ ಪುಟ್ಟಪ್ಪ ಕಳ್ಳಿಮನಿ ಮತ್ತು ಪ್ರಕಾಶ್ ಬಾರ್ಕಿ, ಹಿರೇಕೆರೂರಿನಲ್ಲಿ ವಿಶ್ವನಾಥ ಪಾಟೀಲ್ ಮತ್ತು ನೀಲಪ್ಪ ಗುಡಪ್ಪನವರ್ ನಾಮಪತ್ರ ತಿರಸ್ಕೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT