ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಮಾನೋತ್ಸವ ನಾಳೆ

ವಿಟ್ಲ ಬಾಲಗೋಕುಲ
Last Updated 31 ಆಗಸ್ಟ್ 2018, 10:32 IST
ಅಕ್ಷರ ಗಾತ್ರ

ವಿಟ್ಲ: ‘ಮೂರುಕಜೆ ಮೈತ್ರೇಯಿ ಗುರುಕುಲ ಸಹಕಾರದೊಂದಿಗೆ ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆ ಹಾಗೂ ದಶಮಾನೋತ್ಸವದ ಸಮಾರೋಪ ಸಮಾರಂಭ ಸೆಪ್ಡೆಂಬರ್‌ 2ರಂದು ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ’ ಎಂದು ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಹೇಳಿದರು.

ಷಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ‘ಬಂಟ್ವಾಳದ ವಕೀಲ ಶಿವಾನಂದ ಶೋಭಾಯಾತ್ರೆಯನ್ನು ಉದ್ಘಾಟಿಸುವರು. ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಸಭೆಯ ಅಧ್ಯಕ್ಷತೆ ವಹಿಸುವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಉದ್ಘಾಟಿಸುವರು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್,ಎಸ್ಎಲ್ವಿ ಬುಕ್ ಹೌಸ್‌ನ ದಿವಕರದಾಸ್, ಶರಣಂ ಕನ್‌ಸ್ಟ್ರಕ್ಷನ್ಸ್‌ನ ರವಿ ಬಿ.ಕೆ ಭಾಗವಹಿಸಯವರು. ‘ಕೃಷ್ಣ ಲೀಲೆ-ಕಂಸ ವಧೆ’ ಯಕ್ಷಗಾನ ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ ಮಾತನಾಡಿ ‘ಮಕ್ಕಳಿಗೆ ಎಳವೆಯಿಂದಲೇ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ತಿಳಿಸಿಕೊಡುವ ಕೇಂದ್ರವೇ ಬಾಲಗೋಕುಲ. ಸ್ವಾಭಿಮಾನಿ ಚಿಂತನಾಶೀಲ ಮಕ್ಕಳ ನಿರ್ಮಾಣದ ಪ್ರಯತ್ನ ನಡೆಯುತ್ತದೆ’ ಎಂದರು.

ಗೌರವಾಧ್ಯಕ್ಷ ಆನಂದ ಕಲ್ಲಕಟ್ಟ, ಉಪಾಧ್ಯಕ್ಷ ಶ್ರೀಧರ್, ಆರ್.ಕೆ ಆರ್ಟ್ಸ್‌ ರಾಜೇಶ್ ವಿಟ್ಲ, ನಾಗೇಶ್ ಬಸವನಗುಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT