ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಗುರುವಾರ ಮಧ್ಯಾಹ್ನ 12.20ಕ್ಕೆ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಶಿಷ್ಟಾಚಾರ) ಇಲಾಖೆಗೆ ರಾಜಭವನದಿಂದ ಸೂಚನೆ ರವಾನೆಯಾಗಿದೆ ಎಂದು ಮೂಲಗಳು ಹೇಳಿವೆ.

ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗ, ನಮ್ಮಪಕ್ಷ 105 ಸದಸ್ಯರ ಬಲ ಹೊಂದಿದ್ದು, ಅತಿ ಹೆಚ್ಚು ಸಂಖ್ಯಾಬಲ ಇರುವ ಏಕೈಕ ಪಕ್ಷವಾಗಿದೆ. ಹೀಗಾಗಿ ಸರ್ಕಾರ ರಚನೆಗೆ ನಮಗೇ ಅವಕಾಶ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದೆ.

ಗುಜರಾತಿನವರಾದ ರಾಜ್ಯಪಾಲ ವಜುಭಾಯಿ ವಾಲಾ ಆರೆಸ್ಸೆಸ್ ಹಿನ್ನೆಲೆಯವರು. ಗುಜರಾತ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ, ಬಳಿಕ ಸ್ಪೀಕರ್ ಆಗಿ ಕೆಲಸ ಮಾಡಿದವರು. ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರ ಜತೆ ಉತ್ತಮ ಒಡನಾಟ ಹೊಂದಿದವರು. ಈ ಬಾಂಧವ್ಯ ಬಳಸಿಕೊಂಡು ಸರ್ಕಾರ ರಚನೆ ಮಾಡಲು ಬಿಜೆಪಿ ಮುಂದಾಗಿದೆ ಎಂದೂ ಹೇಳಲಾಗಿದೆ.

ಕೆಪಿಜೆಪಿಯ ಆರ್. ಶಂಕರ್ ಬಿಜೆಪಿ ತೆಕ್ಕೆಗೆ
ರಾಣೆಬೆನ್ನೂರು ಕ್ಷೇತ್ರದಿಂದ ಕರ್ನಾಟಕ ಪ್ರಜಾ ಜನತಾ ಪಕ್ಷ(ಕೆಪಿಜೆಪಿ)ದಿಂದ ಆಯ್ಕೆ ಆಗಿರುವ ಆರ್. ಶಂಕರ್ ಬಿಜೆಪಿ ಪಾಳಯ ಸೇರಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ಶಂಕರ್, ಶಾಸಕಾಂಗ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡುವಾಗ ಅವರು ಸೂಚಕರಾಗಿ ಸಹಿಮಾಡಿದ್ದಾರೆ.

ರಾಜ ಭವನಕ್ಕೆ ಬಿಜೆಪಿ ನಿಯೋಗ ಭೇಟಿ ಮಾಡಿದಾಗ ಶಂಕರ್ ಕೂಡ ಇದ್ದರು. ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರ ಆಪ್ತರೂ ಆಗಿರುವ ಶಂಕರ್, ಹಳೆಯ ಸಖ್ಯದ ಕಾರಣಕ್ಕೆ ಅವರ ಜತೆ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.