ಆಲಮಟ್ಟಿ ರಾಕ್ ಉದ್ಯಾನದಲ್ಲಿ ಆಕರ್ಷಣೆ ಕೇಂದ್ರ

ಸಂಗೀತ ಕಾರಂಜಿ ಆರಂಭ ಶೀಘ್ರ..

ಕಳೆದ ಫೆ 12 ರಿಂದ ಬಂದಾಗಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಇಲ್ಲಿಯ ಸಂಗೀತ ಕಾರಂಜಿಯ ನವೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಈ ತಿಂಗಳಾತ್ಯಕ್ಕೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

ನವೀಕರಣ ಕಾರ್ಯ ನಡೆದಿರುವ ಸಂಗೀತ ಕಾರಂಜಿಯ ಒಳನೋಟ

ಆಲಮಟ್ಟಿ: ಕಳೆದ ಫೆ 12 ರಿಂದ ಬಂದಾಗಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಇಲ್ಲಿಯ ಸಂಗೀತ ಕಾರಂಜಿಯ ನವೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಈ ತಿಂಗಳಾತ್ಯಕ್ಕೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

2008 ರಲ್ಲಿ ಆರಂಭಗೊಂಡಿದ್ದ ರಾಜ್ಯದ ಅತಿ ದೊಡ್ಡ ಸಂಗೀತ ಕಾರಂಜಿಗೆ ಇದೇ ಮೊದಲ ಬಾರಿಗೆ ಆಧುನೀಕರಣ ಭಾಗ್ಯ ದೊರೆಕಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಸುಮಾರು ₹ 1.8 ಕೋಟಿ ವೆಚ್ಚದಲ್ಲಿ ಈ ನವೀಕರಣ ಕಾರ್ಯ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.

ಬೇಸಿಗೆ ಯಲ್ಲಿ ಪ್ರವಾಸಿಗರಿಗೆ ಸಂಗೀತ ಕಾರಂಜಿ ಇಲ್ಲದೆ ನಿರಾಶೆಯಾಗಿದೆ. ದುರಸ್ತಿ ಕಾರ್ಯ ಆರಂಭಗೊಂಡು ಮೂರುವರೆ ತಿಂಗಳಾಗಿದ್ದು ಇನ್ನೂ ಪೂರ್ಣಗೊಂಡಿಲ್ಲ.

ದುರಸ್ತಿ ಕಾರ್ಯಕ್ಕೆ ಬಿಸಿಲು ಅಡ್ಡಿ: ಸಂಗೀತ ಕಾರಂಜಿಯ ದುರಸ್ತಿಗೆ ಬಿಸಿಲಿನ ಪ್ರಖರತೆ ಅಡ್ಡಿಯಾಗಿದೆ. ನೆತ್ತಿ ಸುಡುವ ಬಿಸಿಲಿನಲ್ಲಿ ಕಾರಂಜಿಯ ಪೈಪ್‌ನ ಕಾರ್ಯನಿರ್ವಹಿಸಬೇಕಿರುವುದರಿಂದ ತೀವ್ರ ತೊಂದರೆಯಾಗಿದೆ.

‘ಅದಕ್ಕಾಗಿ ನಸುಕಿನ ಜಾವ 4 ಗಂಟೆಯಿಂದ 11 ರವರೆಗೆ, ಸಂಜೆ 4 ರಿಂದ ರಾತ್ರಿ 11 ರವರೆಗೆ ತಾಂತ್ರಿಕ ನೈಪುಣ್ಯವುಳ್ಳ ಕಾರ್ಮಿಕರು ಕಾರ್ಯ ನಿರ್ವಹಿಸಿದ ಪರಿಣಾಮ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಸಣ್ಣ ಸಣ್ಣ, ಕೈಹಿಡಿ ಯುವ ಕೆಲಸವಾಗಿದ್ದರಿಂದ ಕಾಮಗಾರಿ ತಡವಾಗುತ್ತಿದೆ’ ಎಂದು ಕಾರ್ಮಿಕರು ಒಬ್ಬರು ತಿಳಿಸಿದರು.

ಹಾಡಿನ ಥೀಮ್ಸ್‌ ಅಂತಿಮ: ಸಂಗೀತ ಕಾರಂಜಿಯ ಸಾಫ್ಟವೇರ್‌ ಕೂಡಾ ಅಪಡೇಟ್‌ ಮಾಡಲಾಗಿದ್ದು, ಹೊಸ, ಹೊಸ ಹಾಡಿನ ಸಂಯೋಜನೆ ಮಾಡ ಲಾಗಿದೆ.

ಒಟ್ಟು ಐದೈದು ಹಾಡಿನ ಐದು ಸೆಟ್‌ ಥೀಮ್‌ಗಳನ್ನು, ಅದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ ಕೂಡಾ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹಾಡುಗಳನ್ನು ಅಂತಿಮ ಗೊಳಿಸುತ್ತಾರೆ. ಮೊದಲಿನ ಕಬ್ಬಿಣ ಪೈಪ್‌ ತೆಗೆದು ಪ್ಲಾಸ್ಟಿಕ್‌ ಪೈಪ್‌ ಅಳವಡಿಸ ಲಾಗುತ್ತಿದೆ ಎಂದು ಸಹಾಯಕ ಎಂಜಿನಿಯರ್‌ ಶಂಕ್ರಯ್ಯ ಮಠಪತಿ ತಿಳಿಸಿದರು.

ಏನೆಲ್ಲ ಕಾಮಗಾರಿ?

ಸಂಗೀತ ಕಾರಂಜಿಯ ಲೈಟಿಂಗ್ ವ್ಯವಸ್ಥೆ ಸಂಪೂರ್ಣ ಬದಲಾವಣೆ, ನೂತನ ಆರ್‌ಜಿಬಿ ತಂತ್ರಜ್ಞಾನ (ಆರ್‌ಜಿಬಿ- ಅಂದರೆ ಕೆಂಪು, ಹಸಿರು, ಬಿಳಿ)ದ ಲೈಟಿಂಗ್‌ನ್ನು ನೀರಿನಲ್ಲಿ ಅಳವಡಿಕೆ, ಜನ ಕುಳಿತು ವೀಕ್ಷಿಸುವ ಸ್ಟೇಡಿಯಂನಲ್ಲಿಯೂ ಕೆಳಮಟ್ಟದಲ್ಲಿ ಪಾದಚಾರಿ ರಸ್ತೆಯಲ್ಲಿಯೂ ಪೆಡೆಲ್ ಲೈಟಿಂಗ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ.

ಆರ್‌ಜಿಬಿ ಎನ್ನುವುದು ಮೂರು ಬಣ್ಣವಾಗಿದ್ದು, ಈ ಮೂರು ಬಣ್ಣಗಳ ಸಂಯೋಜನೆಯಿಂದ ಸಹಸ್ರಾರು ಬೇರೆ ಬೇರೆ ಬಣ್ಣಗಳು ಉತ್ಪತ್ತಿಯಾಗುತ್ತವೆ.

ಧ್ವನಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಡಾಲ್ಬಿ ಸೌಂಡ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇಡೀ ಸಂಗೀತ ಕಾರಂಜಿಯ 16 ಕಡೆ ಕೂಡಿಸಲಾಗಿರುವ ಸೌಂಡ್ ಸಿಸ್ಟಮ್ ಡಿಜಟಲೀಕರಣಗೊಳಿಸಿ ಡಾಲ್ಬಿ ಧ್ವನಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಪೈಪ್‌ ಬದಲಾವಣೆಗೆ ಕಾಮಗಾರಿ ಮಾತ್ರ ಬಾಕಿಯಿದ್ದು, ಅದು ಕೂಡಾ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

**
ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ದಿನ ಪ್ರಾಯೋಗಿಕವಾಗಿ ಆರಂಭಿಸಿ, ಮೇ 25 ರೊಳಗೆ ಸಂಗೀತ ಕಾರಂಜಿ ಆರಂಭಿಸಲು ಪ್ರಯತ್ನಿಸಲಾಗುವುದು 
ಎಸ್.ಎ.ಇನಾಮದಾರ ಕಾರ್ಯನಿರ್ವಾಹಕ ಎಂಜಿನಿಯರ್‌ 

ಚಂದ್ರಶೇಖರ ಕೋಳೇಕರ

Comments
ಈ ವಿಭಾಗದಿಂದ ಇನ್ನಷ್ಟು
ಕಲಕೇರಿಗೆ ಬೇಕಿದೆ ಶಾಶ್ವತ ಪರಿಹಾರ

ಸಿಂದಗಿ
ಕಲಕೇರಿಗೆ ಬೇಕಿದೆ ಶಾಶ್ವತ ಪರಿಹಾರ

26 May, 2018

ವಿಜಯಪುರ
ತೊಗರಿ ಕೊಟ್ಟ ಭಾಳ್ ತಪ್ಪ್‌ ಮಾಡಿದ್ವಿ!

‘ತುಸು ಹೆಚ್ಚು ರೊಕ್ಕಾ ಬರ್ತಾವ ಅಂತ ಆಸ್ಯಾಕ ಬಿದ್ದು ನಸಿಕ್‌ನ್ಯಾಕ ನಿಂತು ಪಾಳಿ ಹಚ್ಚಿ ಸರ್ಕಾರದವ್ರಿಗಿ ತೊಗರಿ ಕೊಟ್‌ ಭಾಳ್‌ ತಪ್‌ ಮಾಡ್ಯಾವಿ. ಹೊರಗ...

26 May, 2018

ವಿಜಯಪುರ
ನಿಫಾ: ಜಾಗೃತಿಗೆ ಜಿಲ್ಲಾಧಿಕಾರಿ ಸೂಚನೆ

ನಿಫಾ ವೈರಾಣು ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ನಿಫಾ ವೈರಾಣು ಜ್ವರ ಹರಡಲಿದ್ದು, ಈ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸುವಂತೆ...

26 May, 2018

ವಿಜಯಪುರ
50 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ

2018–19 ಸಾಲಿನಲ್ಲಿ ಜಿಲ್ಲೆಯ ಆಯ್ದ 50 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಾಯೋಗಿಕವಾಗಿ 6 ಮತ್ತು 8ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವಿಭಾಗ...

26 May, 2018
ತೊರವಿಯಲ್ಲಿ ನೀರಿಗೆ ಹಾಹಾಕಾರ

ವಿಜಯಪುರ
ತೊರವಿಯಲ್ಲಿ ನೀರಿಗೆ ಹಾಹಾಕಾರ

25 May, 2018