ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರಿಂದ ಸೆಲೆಬ್ರೆಟಿಗಳವರೆಗೂ ತಲುಪಿದ ಫಿಟ್‌ನೆಸ್ ಅಭಿಯಾನ

Last Updated 24 ಮೇ 2018, 15:34 IST
ಅಕ್ಷರ ಗಾತ್ರ

ಫಿಟ್‌ ಆಂಡ್ ಫೈನ್ ಆಗಿರಬೇಕು ಎನ್ನುವುದು ಆಧುನಿಕ ಜನಾಂಗದ ಇಂಗಿತ. ಆದರೆ ಫಿಟ್‌ನೆಸ್‌ ಸುಖಾಸುಮ್ಮನೆ ಬರುವುದಿಲ್ಲ ಎಂಬುದು ಕೂಡ ಒಪ್ಪಿಕೊಳ್ಳುವ ಸಂಗತಿ. ಆಧುನಿಕ ಜಗತ್ತಿನ ಜನರ ಆರೋಗ್ಯ ಮಂತ್ರವಾದ ಫಿಟ್‌ನೆಸ್ ಕಾಯ್ದುಕೊಳ್ಳಲು ಕೊಂಚ ವ್ಯಾಯಾಮ, ಮಿತಕರ, ರುಚಿಕರ, ಪೌಷ್ಟಿಕಾಂಶಭರಿತ ಆಹಾರ ಇರಲೇ ಬೇಕು.

ಫಿಟ್‌ನೆಸ್ ಮಾತು ಈಗ ಯಾಕೆ ಎಂದೆನಿಸಿರಬಹುದು. ಇದಕ್ಕೆಲ್ಲಾ ಕಾರಣ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಫಿಟ್‌ನೆಸ್ ಬಗ್ಗೆ ಟ್ವಿಟರ್‌ನಲ್ಲಿ ಆರಂಭಿಸಿದ ಅಭಿಯಾನ.

ರಾಥೋಡ್ ಬಿತ್ತಿದ ಫಿಟ್‌ನೆಸ್ ಎಂಬ ಬೀಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮೂಲಕ ಮೊಳಕೆಯೊಡೆದು ಪತ್ನಿ ಅನುಷ್ಕಾ ಶರ್ಮ ಅವರ ಆರೈಕೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಮ್ಮರವಾಗಿ ಬೆಳೆಯಲು ಹೊರಟಿದೆ.

ರಾಥೋಡ್‌ ಅಭಿಯಾನ
ರಾಥೋಡ್ ಅವರು ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಿ ಎಂದು #ಫಿಟ್‌ನೆಸ್‌ಚಾಲೆಂಜ್ ಎಂದು ವಿರಾಟ್ ಕೊಹ್ಲಿ, ಸೈನಾ ನೆಹವಾಲ್, ಋತಿಕ್ ಅವರಿಗೆ ಸವಾಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT