ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ: ಮತ್ತೊಂದು ಬಲಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ನಿಫಾ ವೈರಾಣು ಸೋಂಕಿಗೆ ಭಾನುವಾರ ಇಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರಿಂದ ಕೇರಳದಲ್ಲಿ ನಿಫಾ ವೈರಾಣು ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿದೆ.

ಪಾಲಾಝಿ ಜಿಲ್ಲೆಯ ಅಬಿನ್‌(26) ಸಾವಿಗೀಡಾದ ವ್ಯಕ್ತಿ. ಒಂದು ವಾರದಿಂದ ಅಬಿನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ನಿಫಾ ವೈರಾಣು ಯಾವ ರೀತಿ ಹಬ್ಬಿದೆ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಇನ್ನೂ ಅಧಿಕಾರಿಗಳಿಗೆ ದೊರೆತಿಲ್ಲ.

ಕೇರಳ ಪಶುಸಂಗೋಪನೆ ಇಲಾಖೆ ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಕುರಿತಾದ ಅಧ್ಯಯನ ಸಂಸ್ಥೆ (ಎನ್‌ವಿಐ) ಸಿಬ್ಬಂದಿ ಜಂಟಿಯಾಗಿ ಬಾವುಲಿಗಳು ತಿಂದಿರುವ ಹಣ್ಣುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ತಜ್ಞರಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT