ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ಸ್‌ಗಾಮ್‌ ಕಣಿವೆ ಬಳಿ ಚೀನಾ ಕಾಮಗಾರಿ: ಭಾರತ ಪ್ರತಿಭಟನೆ

Published 2 ಮೇ 2024, 16:14 IST
Last Updated 2 ಮೇ 2024, 16:14 IST
ಅಕ್ಷರ ಗಾತ್ರ

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಮುಖ ಆಯಕಟ್ಟಿನ ಭಾಗವಾಗಿರುವ ಶಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಮಾಣ ಕಾಮಗಾರಿಯು ಕಾನೂನುಬಾಹಿರವಾದದ್ದಾಗಿದೆ ಎಂದು ಭಾರತವು ಚೀನಾ ಬಳಿ ಪ್ರಬಲವಾಗಿ ಪ್ರತಿಭಟನೆ ದಾಖಲಿಸಿದೆ.

‘ಶಕ್ಸ್‌ಗಾಮ್‌ ಕಣಿವೆಯು ಭಾರತದ ಭಾಗವಾಗಿದೆ. 1963ರ ಚೀನಾ–ಪಾಕಿಸ್ತಾನ ಗಡಿ ಒಪ್ಪಂದವನ್ನು ನವದೆಹಲಿ ಎಂದಿಗೂ ಒಪ್ಪಿಕೊಂಡಿಲ್ಲ. ಈ ಒಪ್ಪಂದದ ಮೂಲಕ ಇಸ್ಲಾಮಾಬಾದ್‌ ಈ ಪ್ರದೇಶವನ್ನು ಕಾನೂನುಬಾಹಿರವಾಗಿ ಬೀಜಿಂಗ್‌ಗೆ ಬಿಟ್ಟುಕೊಡಲು ಪ್ರಯತ್ನಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಂಬಂಧ ನಮ್ಮ ನಿರಾಕರಣೆಯನ್ನು ನಿರಂತರವಾಗಿ ತಿಳಿಸಿದ್ದೇವೆ. ಭೂ ಪ್ರದೇಶವನ್ನು ಬದಲಿಸುವ ಕಾನೂನುಬಾಹಿರ ಯತ್ನಗಳ ವಿರುದ್ಧ ನಾವು ಚೀನಾಗೆ ನಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ನಮ್ಮ ಹಿಸತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಮತ್ತಷ್ಟು ಕಾಯ್ದಿರಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT