ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೂ ಹತ್ಯೆ ಪ್ರಕರಣ: ಭಾರತದ ತನಿಖಾ ವರದಿ ನಿರೀಕ್ಷೆ– ಅಮೆರಿಕ

Published 7 ಮೇ 2024, 14:41 IST
Last Updated 7 ಮೇ 2024, 14:41 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಅವರ ಹತ್ಯೆ ಪ್ರಕರಣದ ಕುರಿತು ಭಾರತದ ತನಿಖಾ ವರದಿಗಾಗಿ ಕಾತರದಿಂದ ಇರುವುದಾಗಿ ಅಮೆರಿಕ ಸೋಮವಾರ ತಿಳಿಸಿದೆ. 

‘ಪನ್ನೂ ಹತ್ಯೆ ಕುರಿತು ಅವರು (ಭಾರತ ಸರ್ಕಾರ) ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಅದು ಕಾರ್ಯನಿರ್ವಹಿಸುತ್ತಿದೆ. ಅದರ ಫಲಿತಾಂಶವನ್ನು ನೋಡಲು ಕಾಯುತ್ತಿದ್ದೇವೆ. ಆದರೆ, ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ; ಭಾರತವೂ ಅಷ್ಟೇ ಗಂಭೀರವಾಗಿ ಪರಿಗಣಿಸಿದೆ ಎಂದು ಭಾವಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದರು. 

ಅಮೆರಿಕದ ಪ್ರಜೆ ಹಾಗೂ ಸಿಖ್ ಪ್ರತ್ಯೇಕತಾವಾದಿಯಾದ ಪನ್ನೂ ಹತ್ಯೆಯಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ, ಪನ್ನೂ ಹತ್ಯೆಯ ತನಿಖೆಯ ಬಗ್ಗೆ ಕೆನಡಾದ ಅಧಿಕಾರಿಗಳನ್ನೇ ಕೇಳಬೇಕು ಎಂದು ಮಿಲ್ಲರ್ ಉತ್ತರಿಸಿದರು. 

ಕಳೆದ ವರ್ಷ ಅಮೆರಿಕದ ನೆಲದಲ್ಲಿ ನಡೆದ ಪನ್ನೂ ಅವರ ಹತ್ಯಾ ಪ್ರಕರಣದಲ್ಲಿ ಭಾರತದ ಬೇಹುಗಾರಿಕೆ ಸಂಸ್ಥೆ (ರಾ) ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿತ್ತು. ಆದರೆ, ಈ ವರದಿಯನ್ನು ಭಾರತ ಸರ್ಕಾರ ಅಲ್ಲಗಳೆದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT