ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿಗೆ ಬರಲಿದೆ ಹರ್ಮನ್‌ ಮಿಲ್ಲರ್‌

Last Updated 11 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಬೆಳೆದಂತೆ ಜನರ ಅಭಿರುಚಿಯೂ ಬದಲಾಗುತ್ತೆ. ಆಧುನಿಕ ಜೀವನ ಶೈಲಿಯಲ್ಲಿ ಬದುಕು ಯಾಂತ್ರಿಕವಾಗಿದೆ. ದಿನವಿಡೀ ಒಂದೆ ಕಡೆಯಲ್ಲಿ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿ ಕಂಪೆನಿಯಲ್ಲಿ ಕೆಲಸ ಮಾಡುವ ಅನೇಕರದ್ದು.

ಒತ್ತಡ ಹಾಗೂ ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರವೆಂಬಂತೆ ವಿವಿಧ ಬಗೆಯ ಪೀಠೋಪಕರಣಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಇಂಥ ಪೀಠೋಪಕರಣಗಳ ತಯಾರಿಕಾ ಸಂಸ್ಥೆಗಳಲ್ಲಿ ಹರ್ಮನ್‌ ಮಿಲ್ಲರ್ ಸಹ ಒಂದು.

ಉನ್ನತ ಗುಣಮಟ್ಟದ– ಆಂಟಿಕ್ ರಿವೈವಲ್ ಶೈಲಿಯ ಪೀಠೋಪಕರಣಗಳನ್ನು ಉತ್ಪಾದಿಸುವ ಈ ಕಂಪೆನಿ 1909ರಲ್ಲಿ ಆರಂಭವಾಯಿತು. ಇದೀಗ ಹರ್ಮನ್ ಮಿಲ್ಲರ್ ತನ್ನ ಮಾರುಕಟ್ಟೆಯನ್ನು ಭಾರತಕ್ಕೂ ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ.

ಬಿಡದಿಯ ಸಮೀಪ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಬೀಜಿಂಗ್‌, ಮನಿಲಾ, ಮೆಲ್ಬರ್ನ್ ಮತ್ತು ಬೆಂಗಳೂರು ನಗರಗಳ ವಿನ್ಯಾಸಕಾರರು ಪೀಠೋಪಕರಣಗಳ ವಿನ್ಯಾಸದ ಆಲೋಚನೆಯನ್ನು ಪರಸ್ಪರ ಹಂಚಿಕೊಳ್ಳಲು ಸಾಧ್ಯವಾಗುವಂತೆ  ಇತ್ತೀಚೆಗೆ ವಿನ್ಯಾಸದ ಹಬ್ಬ ಆಯೋಜಿಸಿತ್ತು.

ಆಧುನಿಕ ಕೆಲಸದ ಶೈಲಿಗೆ ತಕ್ಕ ಕುರ್ಚಿಗಳನ್ನು ವಿನ್ಯಾಸಗೊಳಿಸುವುದು ಪೀಠೋಪಕರಣ ವಿನ್ಯಾಸಕಾರ ಎದುರು ಇರುವ ಬಹುಮುಖ್ಯ ಸವಾಲಾಗಿದೆ. ಹರ್ಮನ್ ಮಿಲ್ಲರ್ ಈ ನಿಟ್ಟಿನಲ್ಲಿ ಕೊಂಚ ಮುಂದಿದೆ. ಸಂಸ್ಥೆ ವಿನ್ಯಾಸ ಮಾಡಿರುವ ಕುರ್ಚಿಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ನಿರಾಯಾಸವಾಗಿ ಕೆಲಸ ಮಾಡಬಹುದಾದ ರೀತಿಯಲ್ಲಿ ಮೇಜು ಹಾಗೂ ಕುರ್ಚಿಗಳು ಇವೆ. ಸ್ಥಳಾವಕಾಶಕ್ಕೆ ತಕ್ಕಂತೆ ಕೊಠಡಿಯ ಅಂದವನ್ನು ಹೆಚ್ಚಿಸುವ ಅವಕಾಶವನ್ನೂ ಈ ವಿನ್ಯಾಸ ಎತ್ತಿ ತೋರುತ್ತದೆ.

ವಿನ್ಯಾಸ ಹಬ್ಬದಲ್ಲಿ ಎಲ್ಲರ ಗಮನ ಸೆಳೆದದ್ದು ‘ಆಕ್ಟಿವಿಟಿ ಚೇರ್‌’. ಇದು ತ್ವರಿತ ಆರಾಮ ನೀಡುವ ಐಷಾರಾಮಿ ಕುರ್ಚಿ. ದೇಹದ ಆಯಾಸವನ್ನು ಸ್ವಯಂ ಚಾಲಿತವಾಗಿ ನಿಯಂತ್ರಿಸಬಲ್ಲದು ಎನ್ನುವುದು ಕಂಪೆನಿಯ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT