ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ತೆರೆಯುವ ಮನೆಯ ಕಿಟಕಿ

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಮನೆಗೆ ಗಾಳಿ ಬೆಳಕಿನ ಸಂಚಾರ ಹೆಚ್ಚಿದ್ದರೆ ಮನಸ್ಸು ಉಲ್ಲಾಸದಿಂದ ಇರುತ್ತದೆ. ಮನೆಯ ಕಿಟಕಿಗಳು ದೊಡ್ಡದಾಗಿದಷ್ಟು ವಾಸಿಸುವವರ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ದೊಡ್ಡ ಕಿಟಕಿಗಳನ್ನು ಅಳವಡಿಸುವುದು ಈಗೀನ ಟ್ರೆಂಡ್‌. ‘ವೀಂಡೊ ವಾಲ್‌’ ಅನ್ನುವ ಪರಿಕಲ್ಪನೆ ಈಗ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕ ಸೂಕ್ತ ಅಳತೆ, ಬಣ್ಣ, ಮರಗಳ ಆಯ್ಕೆ ಬಹಳ ಮುಖ್ಯ.

ಬಣ್ಣದ ಆಯ್ಕೆ
ಹಿಂದಿನ ಕಾಲದಲ್ಲಿ, ಕಪ್ಪು ಅಥವಾ ಬೂದು ಬಣ್ಣವನ್ನು ಕಿಟಕಿಗೆ ಬಳಸುವುದು ಅತ್ಯಂತ ಜನಪ್ರಿಯವಾಗಿತ್ತು. ಆದರೆ ಈ ದಿನಗಳಲ್ಲಿ, ನೀಲಿ ಕಿಟಕಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಸಮುದ್ರ ಹಸಿರು ಹಾಗೂ ನೀಲಿ  ಬಣ್ಣ ಮತ್ತು ಅದರ ಶೇಡ್‌ಗಳು  ಮಾರುಕಟ್ಟೆಯನ್ನು ಆವರಿಸಿವೆ.
ತಿಳಿ ಬಣ್ಣ ಇಷ್ಟಪಡುವವರು ಹಿತವಾದ ಐವರಿ ಬಿಳಿ, ಲ್ಯಾವೆಂಡರ್ ಮತ್ತು ಬೂದು ವರ್ಣಗಳನ್ನು ಕಿಟಕಿಗೆ ಬಳಸಬಹುದು. ಸ್ವಲ್ಪ ರಾಯಲ್‌ ಲುಕ್‌ಗಾಗಿ ಕಿತ್ತಳೆ ಮತ್ತು ಚಿನ್ನ ಬಣ್ಣಗಳನ್ನು ಬಳಸಬಹುದು, ಆದರೆ ಕಿಟಕಿ ಬಣ್ಣ ಆಯ್ಕೆ ಮಾಡುವ ಮೊದಲು ಗೋಡೆ ಬಣ್ಣಕ್ಕೂ ಕಿಟಕಿ ಬಣ್ಣಕ್ಕೂ ಹೊಂದುವ ಅಥವಾ ವಿರುದ್ಧ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು.

ಪರಿಸರ ಕಾಳಜಿ
ಪರಿಸರಪ್ರಿಯರಿಗಾಗಿ ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಪರಿಸರ ಸ್ನೇಹಿ ಬಣ್ಣಗಳು ಲಭ್ಯವಿದೆ. ಕರಗಬಲ್ಲ, ವಿಷಕಾರಿಯಲ್ಲದ ಪರಿಸರ ಸ್ನೇಹಿ ಬಣ್ಣಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಮನೆಯೊಳಗಿನ ಸೆಕೆ ನಿವಾರಿಸಿಕೊಳ್ಳಲು ದೊಡ್ಡ ತೆರೆದ ಕಿಟಕಿಗಳು ಉತ್ತಮ. ಅಲರ್ಜಿ ಇರುವವರು ಕರ್ಟನ್‌ ಬದಲು  ಸೂಕ್ಷ್ಮಜೀವಿ ವಿರೋಧಿ ಗಾಜುಗಳು, ನೆಟ್‌ ಅವಳವಡಿಕೊಳ್ಳಬಹುದು.

ರಿಮೋಟ್‌ ಕಂಟ್ರೋಲ್‌
ಒಂದು ಸ್ವಿಚ್ ಅಥವಾ ಇಂಟರ್ನೆಟ್ ಸ್ಪರ್ಶದಿಂದ ನಿಯಂತ್ರಿಸಬಹುದಾದ  ಕಿಟಕಿಗಳು ಬಂದಿವೆ. ಮನೆಯಲ್ಲಿನ ವಾತಾವರಣ ಬಿಸಿಯಾದರೆ ಅಥವಾ ಆಮ್ಲಜನಕ ಅಂಶ ಕಡಿಮೆಯಾದರೆ ತಮ್ಮಷ್ಟಕ್ಕೆ ತೆರೆದುಕೊಳ್ಳುವ ಸೆಸ್ಸರ್‌ ಅಳವಡಿಸಲಾಗಿರುತ್ತದೆ.

ಗ್ರಾಫಿಕ್‌ ಮತ್ತು ಡಿಸೈನ್
ದಪ್ಪ ಮುದ್ರಣಗಳು ಮತ್ತು ಕ್ರಿಯೇಟಿವ್‌ ಮಾದರಿಗಳ ಗ್ರಾಫಿಕ್ ಮುದ್ರಣಗಳನ್ನು ಹಾಕಿಸಿಕೊಳ್ಳುವುದು ಕೂಡ ಇಂದಿನ ಟ್ರೆಂಡ್‌. ಹೂ, ಪಕ್ಷಿಯ ವಿನ್ಯಾಸ, ವಿಶಿಷ್ಟ ಸಿಗ್ನೇಚರ್, ಸರಳ ರೇಖೆಗಳನ್ನು ಕೂಡ ಹಾಕಿಕೊಳ್ಳಬಹುದು.

ಇದಲ್ಲದೇ ವಿಶಿಷ್ಟ ಕಾಟನ್‌ ಕೂಡ ಬಳಸಬಹುದು. ರೇಷ್ಮೆ ಬಟ್ಟೆಯ ಕರ್ಟನ್‌ಗಳು ಇಂದಿನ ಫ್ಯಾಷನ್‌. ಮೃದು ಜವಳಿ, ಹಗ್ಗಗಳು, ಮಣಿಗಳು, ಕಸೂತಿ ಇರುವ ಬಟ್ಟೆಗಳನ್ನು ಬಳಸಬಹುದು. ಸಾದ ಬಟ್ಟೆಯ ಕರ್ಟನ್‌ಗೆ ವೆಲ್ವೆಟ್‌ ಬಟ್ಟೆಯಿಂದ ಮತ್ತಷ್ಟು ಡಿಸೈನ್‌ ಕೂಡ ಮಾಡಬಹುದು. ಪರಿಸರ ಪ್ರಜ್ಞೆಯ ಗ್ರಾಹಕರು ಬಿದಿರು ಮತ್ತು ಮರದ ನೈಸರ್ಗಿಕ ತಂಡುಗಳಿಂದ  ವಿಭಿನ್ನವಾಗಿ ಕಿಟಕಿಯನ್ನು ಅಲಂಕಾರ ಮಾಡಿಕೊಳ್ಳಬಹುದು.

ಮಲಗುವ ಕೋಣೆ
ಮಾಸ್ಟರ್ ಬೆಡ್‌ರೂಂಗೆ ಸೂಕ್ತ ಕಿಟಕಿ ಅಗತ್ಯ. ಕೆಳ ಮಹಡಿಯಲ್ಲಿ ದಂಪತಿಗಳ ಕೋಣೆ ಇರುವುದಾದರೆ ತೀರ ದೊಡ್ಡ ಕಿಟಕಿ ಇಡದೇ ಇರುವುದು ಉತ್ತಮ. ಇನ್ನು ಮಕ್ಕಳು ಮಲಗುವ ಕೋಣೆಯಲ್ಲಿ ಸುರಕ್ಷತೆ ಮುಖ್ಯ, ಕಿಟಕಿಗಳು ಸ್ವಲ್ಪ ಎತ್ತರದಲ್ಲೇ ಇರುವುದು ಉತ್ತಮ. ಕಿಟಕಿಯ ಅರ್ಧ ಭಾಗವನ್ನು ಮಾತ್ರ ತೆರೆಯಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಅವಶ್ಯಕತೆ ಮತ್ತು ಅಂದಗೆಡದಂತೆ ಉತ್ತಮ ರೀತಿಯಲ್ಲಿ ಕಿಟಕಿಗಳನ್ನು ನಿರ್ಮಿಸಿಕೊಂಡರೆ, ಉತ್ತಮ ಆರೋಗ್ಯ ಮತ್ತು ಮನ ಶಾಂತಿಯನ್ನು ಪಡೆಯಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT