ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ ಯಾವಾಗ?

Last Updated 5 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ರಿಸಲ್ಟಲೇ’, ಅಂದ ಬಸ್ಯ.
‘ತಗಂಡೇನ್ಮಾಡ್ಲಿ?’ ಅಂದೆ.
‘ನೀ ಯಾ ಪಾರ್ಟಿಲೇ?’ ಅಂದ.
‘ವೊಗಲೇ. ಯೆಲ್ಲಾ ಪಾರ್ಟಿಗ್ಳೂ ವೊಲ್ಸ್ ಮಾಡ್ಕಂಡವೆ. ನಾ ಯಾ ಪಾರ್ಟಿನೂ ಅಲ್ಲ’, ಅಂದೆ.
‘ಅಂಗಂತಿಯಾ?’
‘ಮತ್ತಿನ್ನೇನು? ಯೀ ರಾಜಕೀಯ ಮಂದಿ ಕೈ ಆಕಿದ್ದೆಲ್ಲಾ ವೊಲಸೇ. ಕೈ ಆಕಿ ಕುಲಗೆಡಿಸೋರು
ಒಬ್ರು, ಜನಗಳ ಕಿವಿ ಮ್ಯಾಗೆ ಕಮಲದ ಊವು ಇಕ್ಕೋರು ಇನ್ನೊಬ್ರು, ಭತ್ತದ ತೆನ್ಯಾಗೇ
ಬಾರ್ಸೋರು ಮತ್ತೊಬ್ರು. ಯೆಲ್ಲ ಆಟೇ. ಯೀ ರಾಜ್ಕೀಯ ಮಂದಿ ಯಾವ್ ವಿಸ್ಯನ ಅದ್ರ್
ಪಾಡಿಗೆ ಬಿಟ್ಟಾರೆ, ಯೇಳು. ಬೈಯೆಲೆಕ್ಸನ್ನು, ಟಿಪ್ಪು ಜಯಂತಿ, ಶಬ್ರಿಮಲೈಯಿ, ಅಯೋದ್ಯೆ, ವಲ್ಲಬಾಯ್ ಪ್ರತಿಮಿ, ಕಡೀಕ್ ನಮ್ ರಾಜ್ಯೋಸ್ತವ ಪ್ರಸಸ್ತಿನೂ ಬಿಡ್ಲಿಲ್ಲ,
ಗಬ್ಬೆಬ್ಬಿಸಿಟ್ರು...’
‘ಚಲೋ ಮಂದಿನೂ ಅದಾರ್ಲೇ’.
‘ಅದಾರೆ. ಆದ್ರೆ ಮೂಲ್ಯಾಗ್ ಕುಂತಾರೆ. ಅವ್ರು ಮುಂದ್ ಬಂದು ರಾಜ್ಕೀಯಕ್ಕಿಳ್ಯಮಟ ನಾ
ಯಾ ಪಾರ್ಟಿನೂ ಅಲ್ಲ’.
‘ಸರಿ ಬಿಡು, ಅಂಗೇ ಮಾಡು. ಯಿವತ್ತು ನರಕ ಚತುರ್ದಸಿ. ಹಬ್ಬ ಜೋರಾ?’
‘ರಾಜ್ಕೀಯದಾಗಿರ ನರ್ಕಾಸುರ್‍ರ ಸಮ್ಮಾರ ಆಗಮಟ ಹಬ್ಬಾನೂ ಜೋರಿಲ್ಲ, ದಿಬ್ಣಾನೂ
ಜೋರಿಲ್ಲ. ಸುಮ್ನೆ ಹಬ್ಬ ಮಾಡ್ಬಕು, ಮಾಡ್ಬಕು, ಅಸ್ಟೆ. ಯೀ ಪುಢಾರಿ ಪಡಪೋಸಿಗ್ಳು,
ಮೂಲಭೂತಗ್ಳು, ಯಿಂತೋರ್ನೆಲ್ಲ ಬಲಿ ಆಕಂಥಾ ತ್ರಿವಿಕ್ರಮ ಉಟ್ಟಿಬಂದಾಗ್ಲೇ ನಮ್ಗೆ
ನಿಜವಾದ್ ದೀಪಾವ್ಳಿ ನೋಡಪ’.
‘ಸರಿ ನೀನ್ ಅವಾಗೇ ದೀಪಾವ್ಳಿ ಮಾಡು, ನಮ್ಮ್ ಉಡ್ರು ಅಲ್ಲೀಮಟ ಸುಮ್ಕಿರಂಗಿಲ್ಲ, ಪಟಾಕಿ ಕೇಳಕತ್ಯರೆ. ತಗಳಕೋಕ್ಕಿನಿ. ಆಗ್ಲೇ ಗಂಟಿ ಯೆಂಟಾಗಕ್ಬಂತು. ಅತ್ರೊಳಗೆ ವೊಡ್ದು
ಮುಗ್ಸಿರ್ಬಕು. ಸಿಗಣ’.
ಯಿಸ್ಟಂದನೇ ವುತ್ರುಕ್ಕ್ ಕಾಯ್ದಲೇ ವೊಂಟೇವೋದ ಬಸ್ಯ.
ನಾನು, ‘ಬೈಯೆಲೆಕ್ಸನ್ ರಿಸಲ್ಟುಗ್ಳು, ಆಮ್ಯಾಕಿನ್ ಅಬ್ರ, ಆರ್ಬಟ ಯೆಲ್ಲ ಬರ್ಜರಿ
ಧಡಾಕಿ ಯಿದ್ದಂಗಿರ್ತವೆ, ನೋಡಣ’ ಅನ್ಕಂತ ಟೀವಿಕಡಿ ವೊಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT