ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಯ’ ವಾಸಿ ಮಾಡುವುದು ಬೇಡವೆ?

Last Updated 6 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ವಾರ್ತಾ ಇಲಾಖೆ ಆಯೋಜಿಸಿರುವ ‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ಕುರಿತ (ವಾ.­ವಾ. ಫೆ. 6)   ಪ್ರಕಾಶ್‌ ಕಾಕಾಲ್‌ ಅವರ  ಪ್ರತಿ­ಕ್ರಿಯೆ ನೋಡಿ ದಿಗ್ಭ್ರಮೆಯಾಯಿತು. ಸರ್ಕಾರದ ಹಣ­ದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವು­ದನ್ನು ಆಕ್ಷೇಪಿಸಿರುವ ಅವರು, ಅರ್ಥವಿಲ್ಲದ ಭಯ­ವನ್ನು ತೋಡಿಕೊಂಡಿದ್ದಾರೆ.

ಬ್ರಾಹ್ಮಣರನ್ನು ಖಳನಾಯಕರಂತೆ ಬಳಸಲಾ­ಗಿದೆ. ಆ ಪಾತ್ರಗಳ ಬಾಯಿಂದ ಹೊಲೆಯ, ಅಸ್ಪೃಶ್ಯ ತರದ ಶಬ್ದಗಳನ್ನು ಹೊರಡಿಸಿ ಸಾಮರಸ್ಯ ಕದಡುವ ಅಪಾಯವಿದೆ ಎಂದಿರುವುದು ದೇಶದ ಶ್ರೇಣೀಕೃತ ಸಮಾಜ­ದಲ್ಲಿ ಬದುಕು­ತ್ತಿರುವ ನಮ್ಮಂಥ­­ವರಿಗೆ ಆಶ್ಚರ್ಯದ ಸಂಗತಿ. ಶ್ರೀಯುತರು ಪ್ರತಿದಿನ ಬೆಳಿಗ್ಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪತ್ರಿಕೆ­ಗಳನ್ನು ಓದುತ್ತಾ­ರೆನಿಸುತ್ತದೆ. ಅಸ್ಪೃಶ್ಯತೆ ಆಚರಣೆ,
ಜಾತಿ ನಿಂದನೆ, ಬಹಿಷ್ಕಾರದಂತಹ ಸುದ್ದಿಗಳಿಲ್ಲದೆ ಯಾವ ಪತ್ರಿಕೆಗಳೂ ಮುದ್ರಣಗೊಳ್ಳುವುದಿಲ್ಲ.

ತಳಸಮುದಾಯಗಳ ಜನರನ್ನು ಮನುಷ್ಯರಾ­ಗಿಯೂ ಕಾಣದೆ ಗಾಯದ ಬೀಜ­ಗಳನ್ನು ನೆಟ್ಟ ಇವರು ಈಗ ಮನಸ್ಸಿಗೆ ಬೇಸರ ಪಟ್ಟುಕೊಳ್ಳುತ್ತಿರು­ವುದನ್ನು ನೋಡಿ­ದರೆ ಈ ರೂಪಕ ಪ್ರದರ್ಶನ ಸಾರ್ಥಕ­­ವಾಗಿದೆ. ಇಂಥ ಪ್ರಯತ್ನಗಳನ್ನು ವಿಸ್ತರಿಸು­ವಂತೆ ಒತ್ತಾಯ ಮಾಡಬೇಕಿದೆ.ಸಾವಿರ ವರ್ಷಗಳ ಹಿಂದಿನ ಗ್ರಂಥಗಳನ್ನು ತಿರುಚ­ಲಾಗಿದೆ ಎಂದು ಹೇಳಿರುವ ಶ್ರೀಯುತರ ಮಾತನ್ನು ಕನ್ನಡ ಸಾಹಿತ್ಯ-, ಸಂಸ್ಕೃತಿಯ ಕನಿಷ್ಠ ಜ್ಞಾನ­­ವಿರುವ ಯಾರೂ ಒಪ್ಪಲಾರರು. ಗಾಯ ಮಾಡಿ­­ದ್ದನ್ನು ಒಪ್ಪಿಕೊಂಡಿರುವ ಇವರು, ಅವು ವರ್ತಮಾನದಲ್ಲಿ ರಣಗೊಂಡಿರುವುದನ್ನು ಕಾಣಲು ಹೆದರಿ, ಕೆರೆಯಬೇಡಿ ಎಂದು ಕಣ್ಣು­ಮುಚ್ಚಿ ಕೂಗಿದರೆ? ಇರುವ ಗಾಯ ಮೈ-ಮನಸ್ಸು­ಗಳನ್ನು ವ್ಯಾಪಿಸಿ
ದಾಗ ಅದನ್ನು ವಾಸಿ ಮಾಡುವ ಪ್ರಯತ್ನ ಮಾಡುವುದು ಮೊದಲ ಘಟ್ಟ. ಗಾಯ ಆಗದ ಹಾಗೆ ತಡೆಯುವುದು ನಂತರದ ಕೆಲಸ­ವಲ್ಲವೇ? ಆ ಕೆಲಸ ಎಲ್ಲರದಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT