ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ನೀಡುವ ರಜೆ, ಪಿಕ್ನಿಕ್‌ಗೆ ಬಳಕೆಯಾಗದಿರಲಿ

Last Updated 11 ಮಾರ್ಚ್ 2019, 20:28 IST
ಅಕ್ಷರ ಗಾತ್ರ

ಚುನಾವಣೆಯ ದಿನಗಳಲ್ಲಿ ಸರ್ಕಾರ ಎಲ್ಲಾ ಮನರಂಜನೆಯ ತಾಣಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ಹೋಂ ಸ್ಟೇ
ಗಳನ್ನು ಸುಗ್ರೀವಾಜ್ಞೆ ಹೊರಡಿಸಿ ಕಡ್ಡಾಯವಾಗಿ ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಮತದಾನಕ್ಕೆಂದು ನೀಡುವ ರಜೆ, ಮೋಜು–ಮಸ್ತಿಗಾಗಿ ಬಳಕೆಯಾಗಲಿದೆ. ಆಯಾ ಜಿಲ್ಲಾಡಳಿತ ಈ ಕುರಿತು ಖಡಕ್ಕಾದ, ಖಚಿತವಾದ ಮತ್ತು ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು.

ಮತ ನೋಂದಣಿ ಮಾಡಿಕೊಳ್ಳಿ ಎನ್ನುವುದು, ನಂತರ ಮತದಾನದ ಪ್ರಮಾಣ ಕಡಿಮೆಯಾಗಿದೆ ಎಂದು ಗೋಳಾಡುವುದರ ಬದಲು, ಆ ದಿನ ಮತದಾನದ ಸಮಯದಲ್ಲಿ ಟಿ.ವಿ, ಚಿತ್ರಮಂದಿರ ಮುಂತಾದ ಮನರಂಜನಾ ಸಾಧನಗಳನ್ನು ಸಹ ಬಂದ್ ಮಾಡಬೇಕು. ಹಾಗೆಯೇ ನಿರಂತರವಾಗಿ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸದವರಿಗೆ, ಸಾರ್ವಜನಿಕ ಸೌಲಭ್ಯಗಳನ್ನು (ಅಡುಗೆ ಅನಿಲ, ಚಾಲನಾ ಪರವಾನಗಿ, ದೂರವಾಣಿ ಸೌಲಭ್ಯ, ವಿದ್ಯುತ್ ಸೌಲಭ್ಯ, ವಿದೇಶಿ ಪ್ರಯಾಣ, ಸಾಲ ಸೌಲಭ್ಯ ಸಬ್ಸಿಡಿ ಇತ್ಯಾದಿ) ಹಂತಹಂತವಾಗಿ ಹಿಂಪಡೆಯಬೇಕು. ದೇಶದ ಹಿತಚಿಂತನೆ ಮಾಡದವರಿಗೆ ಪುಗಸಟ್ಟೆ ಸವಲತ್ತುಗಳನ್ನು ಯಾಕೆ ನೀಡಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT