ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟು ಹಾಕದಿದ್ದರೆ ‘ಮನಿ ಬ್ಯಾಕ್‌’!

Last Updated 31 ಜನವರಿ 2019, 20:16 IST
ಅಕ್ಷರ ಗಾತ್ರ

ವೋಟಿಗಾಗಿ ನೋಟು ನೀಡಿದ್ದರೂ ಪತ್ನಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತಾಗ, ನೀಡಿದ ಧನವನ್ನು ಭೂಪನೊಬ್ಬ ಗ್ರಾಮಸ್ಥರಿಂದ ಮರಳಿ ಪಡೆದಿರುವ ಸ್ವಾರಸ್ಯಕರ ಸಂಗತಿ ತೆಲಂಗಾಣದಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಬ್ಯಾಂಕ್‌ನಲ್ಲಿ ಇಟ್ಟ ನಮ್ಮ ಬೆವರಿನ ಹಣಕ್ಕೇ ಪಂಗನಾಮ ಹಾಕಿ ವಿದೇಶದಲ್ಲಿ ತಲೆಮರೆಸಿ ಕೊಳ್ಳುವವರು ಇರುವ ಇಂದಿನ ಕಾಲಘಟ್ಟದಲ್ಲಿ, ವೋಟು ಹಾಕದಿದ್ದಲ್ಲಿ ಹಣ ಮರಳಿ ಪಡೆಯುವ ‘ಮನಿ ಬ್ಯಾಕ್’ ಯೋಜನೆ ಆಕರ್ಷಣೀಯವಾಗಿದೆ! ಈ ಮಹಾಶಯ, ಒಂದು ಕ್ವಾರ್ಟರ್ ಮದಿರೆ, ಒಂದಷ್ಟು ಹಣ ನೀಡಿ ಮತದಾರರಿಂದ ಆಣೆ ಮಾಡಿಸಿಕೊಳ್ಳುತ್ತಿದ್ದನಂತೆ.

ಚುನಾವಣೆಯಲ್ಲಿ ಸೋತ ನಂತರ, ಆಯಾ ಮನೆಗಳಿಗೆ ತೆರಳಿ ಆಣೆಯ ಹೆದರಿಕೆ ಹುಟ್ಟಿಸಿ, ಮತ ಯಾರಿಗೆ ಹಾಕಿದ್ದೆಂಬ ನಿಜ ಸಂಗತಿ ಬಾಯಿ ಬಿಡಿಸಿ ಜೊತೆಗೆ ಹಣವನ್ನೂ ಕಕ್ಕಿಸಿಕೊಂಡಿದ್ದಾನೆ. ಹೀಗೂ ಉಂಟೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT