ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈ ಹುಣ್ಣಿಗೆ...?

Last Updated 25 ಜುಲೈ 2018, 19:30 IST
ಅಕ್ಷರ ಗಾತ್ರ

ಲಂಚ ಕೊಟ್ಟರೆ, ಏಳು ವರ್ಷ ಜೈಲು ಶಿಕ್ಷೆಯಂತೆ! ಆದರೂ ‘ಲಂಚ ನೀಡದೆ ಬೇರೆ ದಾರಿ ಇಲ್ಲ’ ಎಂಬ ಸ್ಥಿತಿಯಲ್ಲಿ ಲಂಚ ನೀಡಿದ್ದರೆ, ಅಂಥವರ ವಿರುದ್ಧ ಪ್ರಕರಣವನ್ನು ದಾಖಲಿಸುವುದಿಲ್ಲವಂತೆ. ಆದರೆ, ಅವರು ಏಳು ದಿನಗಳ ಒಳಗಾಗಿ ಭ್ರಷ್ಟಾಚಾರ ತಡೆ ಘಟಕಕ್ಕೆ ಮಾಹಿತಿ ನೀಡಬೇಕು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ‘ಲಂಚ ನೀಡದೆ ಕೆಲಸವಾಗುವುದಿಲ್ಲ’ ಎಂಬುದು ನಮ್ಮ ದೇಶದ ಸಾರ್ವಕಾಲಿಕ ಸತ್ಯ. ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ? ಹೀಗಿದ್ದೂ, ಲಂಚ ತೆಗೆದುಕೊಂಡವರ ಬಗ್ಗೆ ಕರುಣೆ ತೋರಿ, ಕೊಟ್ಟವರನ್ನು ಜೈಲಿಗೆ ತಳ್ಳುವುದು ಯಾವ ನ್ಯಾಯ? ಅದೂ ಅಲ್ಲದೆ, ಲಂಚವನ್ನು ಕೊಟ್ಟ ನಂತರ, ‘ಇಂತಹ ಅಧಿಕಾರಿ ನನ್ನಿಂದ ಲಂಚ
ಪಡೆದಿದ್ದಾರೆ’ ಎಂದು ‘ಭ್ರಷ್ಟಾಚಾರ ತಡೆ ಘಟಕ’ಕ್ಕೆ ಮಾಹಿತಿ ನೀಡಬೇಕು. ಆಗ ಅಂಥವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವುದಿಲ್ಲ. ಆದರೆ, ಈ ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳು ಲಂಚ ಪಡೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ ಸ್ವಾಮಿ?

‘ಮಾಡಿದೋನು ತಪ್ಪಿಸ್ಕೊಂಡ, ನೋಡಿದೋನು ಸಿಕ್ಕಾಕ್ಕೊಂಡ’ ಎನ್ನುವ ಕನ್ನಡದ ಗಾದೆ ಈ ಸಂದರ್ಭಕ್ಕೆ ಅದೆಷ್ಟು ಚೆನ್ನಾಗಿ ಒಪ್ಪುತ್ತದೆ. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT