ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ವಾಹನ

Last Updated 2 ಜೂನ್ 2016, 19:57 IST
ಅಕ್ಷರ ಗಾತ್ರ

‘ದೆಹಲಿ, ಚೆನ್ನೈ, ಬೆಂಗಳೂರಿನ ರಸ್ತೆಗಳು ಅಪಘಾತಕ್ಕೆ ಸಂಬಂಧಿಸಿದಂತೆ ಅತ್ಯಂತ ಅಪಾಯಕಾರಿ’ ಎಂದು ವರದಿ ಯಾಗಿದೆ (ಪ್ರ.ವಾ., ಮೇ 30). ಬಹುತೇಕ ಮಹಾನಗರಗಳ ರಸ್ತೆ ಅಪಘಾತಗಳಿಗೆ ಕೇವಲ ಹದಗೆಟ್ಟ ರಸ್ತೆಗಳೇ ಕಾರಣವಾಗುವುದಿಲ್ಲ. ಅತಿಯಾದ ವಾಹನ ಸಂಚಾರ ದಟ್ಟಣೆಯಿಂದ ರಸ್ತೆ ಅವಘಡಗಳು ಸಂಭವಿಸುತ್ತವೆ.

ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ, ವಾಯುಮಾಲಿನ್ಯ ಹೆಚ್ಚುತ್ತದೆ. ವಾತಾವರಣದಲ್ಲಿನ ಆಮ್ಲಜನಕ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಅಧಿಕವಾಗಿ ಭೂಮಿಯ ತಾಪಮಾನ ಏರಿಕೆಯಾಗುತ್ತದೆ. ಇದಕ್ಕೆ ವಿವೇಚನೆಯಿಲ್ಲದೆ ವಾಹನಗಳನ್ನು ಖರೀದಿಸುವುದೇ ಕಾರಣ. ಇಂದಿನ ಯುವ ಜನಾಂಗ ಕೇವಲ ಶೋಕಿಗಾಗಿ ವಾಹನಗಳನ್ನು ಬಳಸುವುದು ಹೆಚ್ಚಾಗುತ್ತಿದೆ.

ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಅಗತ್ಯಕ್ಕನುಗುಣವಾಗಿ ಒಂದು ವಾಹನವನ್ನಷ್ಟೇ ಖರೀದಿಸುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿ ಸಾವು-ನೋವು ತಪ್ಪುತ್ತದೆ. ನಗರ ಪ್ರದೇಶಗಳು ಸುಗಮ ಸಂಚಾರ ರಸ್ತೆಗಳಾಗಿ ಕಂಗೊಳಿಸುತ್ತವೆ. ಪರಿಸರ ಮಾಲಿನ್ಯವೂ ಹತೋಟಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT