ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಓ ಕಚೇರಿಯಲ್ಲಿ ಕಾಯುವ ಕಷ್ಟ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದಿರಾನಗರದಲ್ಲಿರುವ ಆರ್‌ಟಿಓ ಕಚೇರಿಗೆ ಹೋದವರಿಗೆ ಅಲ್ಲಿನ ಕೆಲಸ ಕಾರ್ಯಗಳು ಮುಗಿಯುವವರೆಗೂ ಗಂಟೆಗಟ್ಟಲೆ ಕಾಯುವುದು ಒಂದು ಸಮಸ್ಯೆಯಾದರೆ, ಹಾಗೆ ಕಾಯುವ ಹೊತ್ತು ಆರಾಮಾಗಿ ಕುಳಿತುಕೊಳ್ಳಲೂ ಆಗುವುದಿಲ್ಲ ಎನ್ನುವುದು ಇನ್ನೊಂದು ದುರಂತ.

ಇಡೀ ಕಚೇರಿಯಲ್ಲಿ ಕೇವಲ ಐದಾರು ಜನರು ಕುಳಿತುಕೊಳ್ಳಬಹುದಾದ ಜಾಗವಿದೆ. ಆದರೆ ಸುಮಾರು 40ರಿಂದ 60 ಮಂದಿ ಅಲ್ಲಿ ತಮ್ಮ ಕೆಲಸಗಳು ಪೂರ್ಣಗೊಳ್ಳಲೆಂದು ಕಾದಿರುತ್ತಾರೆ. ಅಂದರೆ ಆರ್‌ಟಿಓ 12 ಪಟ್ಟು ಕಡಿಮೆ ಸ್ಥಳಾವಕಾಶ ಹೊಂದಿದೆ.

ಇರುವ ಕಟ್ಟಡದಲ್ಲಿ ಹೆಚ್ಚು ಜನರಿಗೆ ಕುಳಿತುಕೊಳ್ಳಲು ಅವಕಾಶ ಒದಗಿಸಿಕೊಡಬೇಕು. ಆದರೆ ಅಲ್ಲಿನ ಸಿಬ್ಬಂದಿ ಹೇಳುವ ಪ್ರಕಾರ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲು ಅಲ್ಲಿ ಸ್ಥಳಾವಕಾಶದ ಕೊರತೆ ಇದೆ. ಹಾಗಿದ್ದಲ್ಲಿ ಕಚೇರಿಯನ್ನು ಸ್ಥಳಾಂತರಿಸುವುದೂ ಸೂಕ್ತ ಕ್ರಮವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT