ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸರಿಯಲ್ಲ

Last Updated 15 ಮೇ 2014, 19:30 IST
ಅಕ್ಷರ ಗಾತ್ರ

‘ರಾಷ್ಟ್ರಪತಿಗಳು ಮತದಾನದಿಂದ ಹೊರಗೆ’ ಎಂಬ ಸುದ್ದಿ ಓದಿದಾಗ, ‘ಇದು ಸರಿಯೇ’ ಎಂಬ ಪ್ರಶ್ನೆ ಮೂಡಿತು. ನಮ್ಮ ಸಂವಿಧಾನದ ಪ್ರಕಾರ ಮತದಾನಕ್ಕೆ ಅರ್ಹ­ರಾದ ಪ್ರತಿಯೊಬ್ಬ ಭಾರತೀಯ ಪ್ರಜೆ ತಪ್ಪದೆ ಮತದಾನ ಮಾಡಬೇಕು ಎಂಬುದು ನಿಯಮ.

ಅನರ್ಹ ಮತದಾರರು ಯಾರ್‍್ಯಾರು ಎಂಬು­ದನ್ನು ಚುನಾವಣೆ ನಿಯಮದಲ್ಲಿ ವಿವರ­ವಾಗಿ ತಿಳಿಸಲಾಗಿದೆ. ಹೀಗಿರುವಾಗ, ರಾಷ್ಟ್ರಪತಿ­ಗಳು ಸಹ ಮೊದಲು ಭಾರತೀಯ ಅರ್ಹ ಪ್ರಜೆ, ಆ ನಂತರ ಆ ಸ್ಥಾನಕ್ಕೆ ನೇಮಕವಾಗಿ ರಾಷ್ಟ್ರಪತಿ­ಗಳಾ­ಗುತ್ತಾರೆ. ಸ್ಥಾನದ ಘನತೆ, ಗೌರವ ಕಾಪಾ­ಡಲು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸು­ತ್ತಾರೆ.

ಆದರೆ ಮತದಾನ  ಅವರ ಹಕ್ಕು. ಇಲ್ಲಿ ಯಾವುದೇ  ಒಂದು ಪಕ್ಷದ ಪರ–ವಿರೋಧ ಎಂಬುದು ಬರುವುದಿಲ್ಲ. ಮುಂದೆ ತಮ್ಮನ್ನು ಆಳುವ ಸರ್ಕಾರ ಯಾವುದಿರಬೇಕೆಂಬುದನ್ನು ಬಹು­­ಮತ­ದಿಂದ ಚುನಾಯಿಸಲು ಅವರು ಮತ ಹಾಕುತ್ತಾರೆಯೇ ಹೊರತು ಅವರು ಯಾರ
ಪರ­ವಾಗಿದ್ದಾರೆಂಬುದು ಇಲ್ಲಿ ಮುಖ್ಯ­ವಾಗುವುದಿಲ್ಲ.

ಈ ವಿಷಯದಲ್ಲಿ ರಾಷ್ಟ್ರಪತಿಗಳ ನಿರ್ಧಾರ ಸರಿ ಎಂದಾದರೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪ್ರತಿ­ಯೊ­ಬ್ಬರೂ ಅಂದರೆ ನ್ಯಾಯಾಧೀಶರು, ಜಿಲ್ಲಾಧಿ­ಕಾರಿ­ಗಳು ಮೊದಲಾದವರು ಅದರಲ್ಲೂ ವಿಶೇಷವಾಗಿ   ಯಾರ್‍್ಯಾರು ಹುದ್ದೆಗೆ ಸೇರುವಾಗ ಪ್ರಮಾಣ ಮಾಡಿ  ಹುದ್ದೆ ಅಲಂಕರಿಸುತ್ತಾರೋ ಅಂತಹ­ವರು ಮತದಾನ ಮಾಡುವಂತಿಲ್ಲ. ಅಂತಹವರ ಮತ ಚಲಾವಣೆ ಆಗಿದ್ದರೆ ತನ್ನಿಂದ ತಾನೆ ಅನರ್ಹಗೊಳ್ಳಬೇಕು ತಾನೆ?

ನಮ್ಮ  ವ್ಯವಸ್ಥೆಯಲ್ಲಿ ಮತದಾನ ಎಂಬುದು ಗೌಪ್ಯತೆಯ ವಿಷಯ. ಪ್ರತಿಯೊಬ್ಬರ ಹಕ್ಕು. ಮತದಾನದಿಂದ ದೂರ ಉಳಿಯುವ  ವಿಷಯ ಕುರಿತು  ಚರ್ಚೆ ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT