ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟೇ ಏನು?

Last Updated 19 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಲತಾ ಜಿ. ಎಂ. ಅವರು ‘ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಆರಿಸಿ ಬಂದ ಸರ್ಕಾರ ಯಾವುದೇ ಒಂದು ಬಗೆಯ ಆಹಾರದ ಮೇಲೆ ನರಭಕ್ಷಕ ಹೊರತುಪಡಿಸಿ ಹೇರುವ ನಿಷೇಧ, ಸಂವಿಧಾನದ ಆಶಯಗಳ ಉಲ್ಲಂಘನೆ’ ಎಂದಿದ್ದಾರೆ (ವಾ.ವಾ., ಮಾ. 16). ನರಭಕ್ಷಕ ಹೊರತುಪಡಿಸಿ ಯಾವುದೇ ಆಹಾರದ ಮೇಲೆ ನಿಷೇಧ ಹೇರುವುದು ಸಂವಿಧಾನದ ಆಶಯಗಳ ಉಲ್ಲಂಘನೆ
ಯಾದರೆ ಪಶುಭಕ್ಷಣೆ ಸಂವಿಧಾನದ ಆಶಯವೆ?

ಮಾಂಸಾಹಾರ ಸ್ವೀಕೃತ ಆಹಾರವಾಗಿದ್ದರೆ, ಗಾಂಧಿ ಜಯಂತಿಯಂದು ಮಾಂಸದ ಅಂಗಡಿಗಳನ್ನು ಮುಚ್ಚಲು ಸರ್ಕಾರವೇ ಏಕೆ ಆದೇಶ ಹೊರಡಿಸುತ್ತದೆ? ಸಸ್ಯಾಹಾರಕ್ಕಿಂತ ಮಾಂಸಾಹಾರದಲ್ಲೇ ಹೆಚ್ಚಿನ ಪೌಷ್ಟಿಕಾಂಶ ಇರಬಹುದು. ಆದರೆ ಶಾಖಾಹಾರದಂತೆ ಸಾತ್ವಿಕ ಆಹಾರವಲ್ಲ. ಈ ಭೂಮಿ ಎಲ್ಲರಿಗೂ ಆಹಾರಧಾನ್ಯ ಒದಗಿಸಲಾರದಷ್ಟು ಬರಡಲ್ಲ. ಆಧುನಿಕ ಮಾನವರು ಬೇಯಿಸಿದ ಮಾಂಸವನ್ನು ಸೇವಿಸುತ್ತಾರೆ. ಆಗಿನ ಅನಾಗರಿಕ ಆದಿ ಮಾನವರಿಂದ ಈಗಿನ ಆಧುನಿಕ ನಾಗರಿಕ ಮಾನವನವರೆಗೆ ಆಗಿರುವ ಬದಲಾವಣೆ ಇಷ್ಟೇ ಏನು?       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT