ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ ಇರಲಿ

Last Updated 15 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪಿ.ಯು. ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ, ಪರೀಕ್ಷೆಗೆ ಮೊದಲೇ ಎರಡು ಬಾರಿ ಸೋರಿಕೆಯಾಗಿತ್ತು. ಈಗ ಮರು ಪರೀಕ್ಷೆಯೂ ಮುಗಿದಿದೆ. ಆದರೆ ಅಧ್ಯಾಪಕರ ಮುಷ್ಕರದಿಂದ ಮೌಲ್ಯಮಾಪನ ವಿಷಯ ಕಗ್ಗಂಟಾಗಿದೆ. ಇದರ ನಡುವೆ ಸರ್ಕಾರವು ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದೆ.

ಆದರೆ, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಚೀಫ್‌, ಡೆಪ್ಯುಟಿ ಚೀಫ್‌ ಎಕ್ಸಾಮಿನರ್‌ಗಳ ನೇಮಕ  ಇನ್ನೂ ಆಗಿಲ್ಲ. ಮುಖ್ಯವಾಗಿ ಕೋಡಿಂಗ್‌ ಕೆಲಸ ಆಗಿಲ್ಲ. ಚೀಫ್‌ ಎಕ್ಸಾಮಿನರ್‌ಗಳು ನೇಮಕ ಆಗದ ಹೊರತು ಕೋಡಿಂಗ್‌ ಕೆಲಸ ಪ್ರಾರಂಭವಾಗುವುದಿಲ್ಲ. ಅಂದಮೇಲೆ ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನ ಕೇಂದ್ರದಲ್ಲಿ ಏನನ್ನೂ ಮಾಡಲಾಗದು.

ಮೌಲ್ಯಮಾಪಕರಿಗೆ ಕನಿಷ್ಠ 3 ರಿಂದ 5 ವರ್ಷಗಳ ಬೋಧನಾ ಅನುಭವ ಇರಬೇಕು. ಅದರಲ್ಲೂ ಸದ್ಯದ ಸಂದರ್ಭದಲ್ಲಿ ಪಾಠ ಮಾಡಿರುವ ಅನುಭವ ಇರಬೇಕು. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮುಂದುವರಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT