ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ: ಬಿಎಂಟಿಸಿಗೆ ತಾತ್ಸಾರ ಏಕೆ?

Last Updated 6 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬಿಎಂಟಿಸಿಯ ಹಲವು ಬಸ್ಸುಗಳಲ್ಲಿ ಮುಂದುಗಡೆ  ‘ಕನ್ನಡ ಕಾಮಧೇನು ‘ಕರ್ನಾಟಕ ಕಲ್ಪವೃಕ್ಷ’ ಹಾಗೂ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಇವೆಲ್ಲ ಮಾತುಗಳನ್ನು ಹಾಕಿರುವುದು ಸರಿಯಾದ ಕ್ರಮ. ಆದರೆ ಅದಕ್ಕೆ ತಕ್ಕ ಹಾಗೆ ಅವರು  ಆಡಳಿತದಲ್ಲಿ ಕನ್ನಡವನ್ನು  ಎಲ್ಲೆಡೆ ಬಳಕೆಗೆ ತರಬೇಕು. ಆದರೆ ಹಾಗೆ ಆಗಿಲ್ಲ.

ಎಲೆಕ್ಟ್ರಾನಿಕ್ಸ್‌ ಫಲಕಗಳಲ್ಲಿ ಕನ್ನಡದ ಬಳಕೆ ಆಗಿಲ್ಲ. ಉದಾಹರಣೆಗೆ  ಬಾಗಮನೆ ಟೆಕ್ ಪಾರ್ಕ್‌ಗೆ ಹೋಗುವ ಬಸ್ಸುಗಳಲ್ಲಿ ಕನ್ನಡದಲ್ಲಿ ಯಾವ ಮಾಹಿತಿ ಕೂಡ ಈ ಎಲೆಕ್ಟ್ರಾನಿಕ್ಸ್‌ ಫಲಕಗಳಲ್ಲಿ ಇಲ್ಲ. ಇದು  ಕನ್ನಡದ ಕಡೆಗಣನೆ.

ಇದು  ಒಂದು ಉದಾಹರಣೆ ಮಾತ್ರ . ಹಲವು ಬಸ್ಸುಗಳಲ್ಲಿ ಅದರಲ್ಲೂ ಕಿತ್ತಳೆ ಬಣ್ಣದ ಮಾರ್ಕೋ ಪೋಲೋ ಬಸ್ಸುಗಳಲ್ಲಿಯೂ ಮುಂದಿನ ನಿಲುಗಡೆಯ ಮಾಹಿತಿಯನ್ನೂ ಕನ್ನಡದಲ್ಲಿ ನೀಡುವುದಿಲ್ಲ. ಇದು  ವಿಪರ್ಯಾ ಸವೇ ಸರಿ.

ದಾರಿ ಮಾಹಿತಿಯಂತಹ ಮುಖ್ಯವಾದ ಮಾಹಿತಿಯನ್ನು ಕನ್ನಡದಲ್ಲಿ ನೀಡಬೇಕಲ್ಲವೇ? ಐ.ಟಿ  ಕಂಪೆನಿಗಳ ಕಡೆಗೆ ಹೋಗುವ ಬಸ್ಸುಗಳಲ್ಲಿ  ಕನ್ನಡದ ಬಳಕೆ ಇಲ್ಲ. ಹಾಗಾದರೆ ಬಿಎಂಟಿಸಿಯ ಪ್ರಕಾರ ಐ.ಟಿಯಲ್ಲಿ ಕೆಲಸ ಮಾಡುವವರಿಗೆ ಕನ್ನಡ ಗೊತ್ತಿಲ್ಲ ಎಂದು ಅಭಿಪ್ರಾಯವೇ?  ಕನ್ನಡಿಗರಿಗೆ ತೊಂದರೆ ಆದರೂ ಬೇರೆಯವರಿಗೆ ತೊಂದರೆ ಆಗಬಾ ರದು ಎಂಬ ಧೋರಣೆಯೇ? ಇನ್ನೂ ಹಲವು ಬಸ್ಸುಗಳಲ್ಲಿ ಸ್ವಾಗತದ ಸಂದೇಶವೂ
ಕನ್ನಡದಲ್ಲಿ ಇಲ್ಲ. ಯಾಕೆ ಈ ಕಡೆಗಣನೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT