ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲೇ ಉಳಿಯಿತು

ಅಕ್ಷರ ಗಾತ್ರ

ಹನಿ ನೀರಾವರಿ ಪದ್ಧತಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಶೇ 50ರಷ್ಟು ಸಬ್ಸಿಡಿ ನೀಡುತ್ತಿತ್ತು. ಇದನ್ನು ಮತ್ತೆ ಶೇ 90ಕ್ಕೆ ಏರಿಸಲಾಯಿತು. ಇದರಿಂದ ಸಾವಿರಾರು ರೈತರು ಸಾಲ-ಸೋಲ ಮಾಡಿ ಅತೀವ ಉತ್ಸಾಹ, ಆಸಕ್ತಿ, ಸಂತೋಷದಿಂದ ಈ ಪದ್ಧತಿಯನ್ನು ಅಳವಡಿಸಿಕೊಂಡರು. ಆದರೆ ಸಬ್ಸಿಡಿ ಯೋಜನೆ ಬರೀ ಕಾಗದಕ್ಕೆ  ಸೀಮಿತವಾಯಿತೇ ಹೊರತು ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ.

ರೈತರ ಸಂಕಷ್ಟಗಳಿಗೆ ಸರ್ಕಾರದ ಇಂತಹ ದ್ವಂದ್ವ ನಿಲುವು ಅಥವಾ ಯೋಜನೆಗಳೂ ಕಾರಣವಾಗುತ್ತವೆ. ಈ ಅನ್ಯಾಯವನ್ನು ಸರಿಪಡಿಸಲು ಬೇಗನೆ ಹಣ ಬಿಡುಗಡೆ ಮಾಡಿ, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT