ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟ ತಪ್ಪುವುದೆಂದು?

Last Updated 18 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಎಲ್ಲರಿಗೂ ತಮ್ಮದೇ ಆದ ಗೌರವ ಇರು­ತ್ತದೆ. ಒಂದು ಗುಂಪಿನಲ್ಲಿ ಯಾರೋ ಒಬ್ಬರು ತಪ್ಪು ಮಾಡಿದರೂ ಇಡೀ ಗುಂಪಿಗೆ ಕೆಟ್ಟ ಹೆಸರು ಬರು­ತ್ತದೆ. ಸಮಾಜದಲ್ಲಿ ನಾವೂ ಎಲ್ಲರಂತೆ ಇರಲು ಅವಕಾಶ ಕೊಡಿ ಎಂದು ಆಗ್ರಹಿಸುವ ಲೈಂಗಿಕ ಅಲ್ಪಸಂಖ್ಯಾತರಿಗೂ ಇದು ಅನ್ವಯಿಸುತ್ತದೆ.

ಕೊಪ್ಪಳದಿಂದ ಬಳ್ಳಾರಿ ಮತ್ತು ಗುಂತಕಲ್‌ಗೆ ಹೋಗುವ ರೈಲುಗಳಲ್ಲಿ ಪ್ರಯಾಣಿಕರಿಗೆ ಲೈಂಗಿಕ ಅಲ್ಪ­ಸಂಖ್ಯಾತರ ಕಾಟ ಹೇಳತೀರದಾಗಿದೆ. ಹಣ ಕೊಡದಿದ್ದರೆ ಕೆಟ್ಟದಾಗಿ ವರ್ತಿಸುತ್ತಾರೆ. ರೈಲಿನಲ್ಲಿ ಟೀ, -ಕಾಫಿ, ಬಿಸ್ಕತ್ತು, ಚಕ್ಕುಲಿಯಂತಹ ತಿನಿಸು­ಗಳನ್ನು, ಇತರ ವಸ್ತುಗಳನ್ನು ಮಾರುತ್ತಾ ಜೀವನ ಮಾಡುವ ಹಲವರಿದ್ದಾರೆ. ಅಂತೆಯೇ ಕಷ್ಟಪಟ್ಟು ದುಡಿ­­ಯಲು ಲೈಂಗಿಕ ಅಲ್ಪಸಂಖ್ಯಾತ­ರಿಗೆ ಯಾಕಾ­ಗದು? ಅವರಿಗೆ ಸಮಾಜ­ದಲ್ಲಿ ಎಲ್ಲರಂತೆ ಇರಲು ಏನು ಮಾಡಬೇಕು ಎಂಬ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ  ಯೋಜಿಸ­ಬೇಕು. ಪ್ರಯಾಣಿಕರಿಗೆ ನೆಮ್ಮದಿ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT