ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಉಲ್ಲಂಘಿಸುವ ಪೊಲೀಸರು!

Last Updated 13 ಮೇ 2013, 19:59 IST
ಅಕ್ಷರ ಗಾತ್ರ

ನಾನು ಇತ್ತೀಚೆಗೆ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕಾರ್ಯನಿಮಿತ್ತ ಹೋಗಿದ್ದೆ. ಆದರೆ ನನ್ನ ವಾಹನವನ್ನು ಠಾಣೆ ಮುಂದೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕಾರಣ ಅಲ್ಲಿ ವಾಹನ ನಿಲ್ದಾಣ ನಿಷಿದ್ಧ. ಜನಸಾಮಾನ್ಯರು ಠಾಣೆಗೆ ಬಂದಾಗ ತಮ್ಮ ವಾಹನ ಎಲ್ಲಿ ನಿಲ್ಲಿಸಬೇಕು. ಒತ್ತಾಯ ಪೂರ್ವಕವಾಗಿ ನಾನು ನಿಲ್ಲಿಸಿದ್ದಕ್ಕೆ ಹೊರ ಬಂದ ನಂತರ ನನ್ನ ವಾಹನಕ್ಕೆ ರೂ 100 ದಂಡ ವಿಧಿಸಿದ್ದಾರೆ.

`ಕಾನೂನು ಉಲ್ಲಂಘಿಸುವ' ಸಾರ್ವಜನಿಕರಿಗೆ ದಂಡ ವಿಧಿಸುವ ಪೊಲೀಸರ ಕಚೇರಿಯಲ್ಲೇ ಹೀಗಾದರೆ ಅವರು ಜನಸಾಮಾನ್ಯರಿಗೆ ಕಾನೂನು ಪಾಠ ಹೇಳಲು ಹೇಗೆ ಸಾಧ್ಯ?

ಇದೇ ಪೊಲೀಸ್ ಸ್ಟೇಶನ್‌ನ ತಳಭಾಗವನ್ನು ಕಚೇರಿಗಾಗಿ ಮೀಸಲಿಟ್ಟಿದ್ದಾರೆ. ಇದು ತಪ್ಪಲ್ಲವೇ? ಮಾತ್ರವಲ್ಲ, ವಶಪಡಿಸಿಕೊಂಡ ವಾಹನಗಳನ್ನೂ ರಸ್ತೆ ಪಕ್ಕದಲ್ಲಿ ನಿಲ್ಲಿಸುವುದೂ ತಪ್ಪಲ್ಲವೇ? ತಾವು ವಶಪಡಿಸಿಕೊಂಡ ವಾಹನಗಳನ್ನೂ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಬಸ್ ನಿಲ್ದಾಣವನ್ನು ಪೊಲೀಸರ ವಾಹನ ನಿಲುಗಡೆಗೆ ಬಳಸುವುದು, ಬಿಎಂಟಿಸಿ ಬಸ್‌ಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದು ಕಾನೂನು ಉಲ್ಲಂಘನೆಯಲ್ಲವೇ?

ಇದಕ್ಕೆ ಮಲ್ಲೇಶ್ವರ ಟ್ರಾಫಿಕ್ ಪೊಲೀಸ್‌ನವರು ಏನು ಹೇಳುತ್ತಾರೆ?

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದಯವಿಟ್ಟು ಮಲ್ಲೇಶ್ವರ ಠಾಣೆಯ ಮುಂದೆ ದ್ಚಿಚಕ್ರ ವಾಹನ ನಿಲ್ದಾಣಕ್ಕೆ ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ಉಪಕಾರ ಮಾಡಿ ಇಲ್ಲವೇ ಪೊಲೀಸರು ಮಾಡುವ `ನೋ ಪಾರ್ಕಿಂಗ್' ಉಲ್ಲಂಘನೆಗೂ ದಂಡ ಹಾಕಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT