ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಮತ್ತು ಕತ್ತೆ

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಂಬಾಲಪಲ್ಲಿಯ ದಲಿತರ ಜೀವಂತ ದಹನ ಪ್ರಕರಣದ ಆರೋಪಿಗಳು ಖುಲಾಸೆಯಾಗಿ­ರು­ವುದು ನಮ್ಮ ತನಿಖಾ ವ್ಯವಸ್ಥೆಯ ವೈಫಲ್ಯ ವಷ್ಟೇ ಅಲ್ಲ, ನಮ್ಮ ಇಡೀ ವ್ಯವಸ್ಥೆ ತಲುಪಿ ನಿಂತಿ­ರುವ ದುರ್ಗತಿಗೆ ಹಿಡಿದ ಕನ್ನಡಿ.

ಕಂಬಾಲಪಲ್ಲಿ ಪ್ರಕರಣ ಖಂಡಿಸಿ ದೇಶದಾ­ದ್ಯಂತ ಪ್ರತಿಭಟನೆಗಳು ನಡೆದವು. ಈ ಅಮಾ­ನುಷ ಕೌರ್ಯದ ಬಗ್ಗೆ ಸಂಸತ್ತಿನಲ್ಲೂ  ಚರ್ಚೆ ಆಗಿತ್ತು. ಈಗ ತೀರ್ಪು ಹೊರಬಿದ್ದ ಮೇಲೆ, ಬ್ರಿಟಿಷ್ ಭಾರತದಲ್ಲಿ ಕಾನೂನು, ಸುವ್ಯವಸ್ಥೆ ಕುರಿತು ಪಂಡಿತ್ ಮೋತಿಲಾಲ್ ನೆಹರೂ ಅವರು ಹೇಳಿದ ಮಾತು ನೆನಪಿಗೆ ಬಂದಿತು:  ‘ಕಾನೂನು ಕತ್ತೆ ಇದ್ದ ಹಾಗೆ, ದುರ್ಬಲರನ್ನು ಅದು ಒದೆಯುತ್ತದೆ ಮತ್ತು ಸಬಲರು ಅದರ ಮೇಲೆ ಸವಾರಿ ಮಾಡುತ್ತಾರೆ’.

ಸ್ವಾತಂತ್ರ್ಯ ಬಂದು ೬೭ ವರ್ಷ ಕಳೆದರೂ ಮೋತಿ­ಲಾಲರ ಆ ಮಾತು ಇಂದಿಗೂ ಅನ್ವಯಿ­ಸು­ತ್ತಿದೆ ಎಂದರೆ, ಸ್ವಾತಂತ್ರ್ಯ ‘ಎಲ್ಲಿದೆ’ ಎಂಬುದು ಸ್ವಯಂವೇದ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT