ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ಮೈಸೂರಿಗಷ್ಟೇ ಸೀಮಿತವಾದವರು’ ಹೇಳಿಕೆ ಶ್ರೇಯಸ್ಕರವಲ್ಲ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಿರಿಯರಾದ ಪಾಟೀಲ ಪುಟ್ಟಪ್ಪ ‘ಕನ್ನಡ ನಾಡಿನ ವಿಭಜನೆಯೆಂದರೆ ಅದು ನನ್ನ ಶವದ ಮೇಲೆ ಆಗಲಿ’ ಎಂದು ಅಖಂಡ ಕರ್ನಾಟಕದ ದೀಕ್ಷೆ ತೊಟ್ಟವರು. ಅವರು ಈಚೆಗೆ ‘ಕುವೆಂಪು ಮೈಸೂರಿಗಷ್ಟೇ ಸೀಮಿತವಾದವರು, ಅವರು ಎಂದೂ ಸಮಗ್ರ ಕರ್ನಾಟಕವನ್ನು ಸುತ್ತಿ ನೋಡಲಿಲ್ಲ’ (ಪ್ರ.ವಾ., ನ. 20) ಎಂದಿದ್ದಾರೆ. ಇದು ಪಾಪು ಅವರ ಘನತೆಗೆ ತಕ್ಕ ಹೇಳಿಕೆಯಲ್ಲ.

ಕುವೆಂಪು ತಮ್ಮ ದಾರ್ಶನಿಕ ದೃಷ್ಟಿಯಿಂದ ಹೇಳಿರುವ ‘ಬರಿಯ ಚದರ ಮೈಲಿಗಳಲ್ತು ಕರ್ನಾಟಕ ವಿಸ್ತೀರ್ಣಂ, ನೆನೆನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ. ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ, ಪ್ರಾಣಮಯ ಭಾವ ಪ್ರದೇಶ ವಿಸ್ತೀರ್ಣಮಂ ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ’ ಎಂಬ ಸಾಲುಗಳನ್ನು ಪಾಪು ತಮ್ಮ ಹೃದಯದ ಕಣ್ಣನ್ನು ತೆರೆದು ಪರಿಭಾವಿಸಬೇಕು. ನಾವೂ ರಾಜಕಾರಣಿಗಳಂತೆ ಮಾತನಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT