ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ: ಕಾನೂನು ಬಿಗಿಯಾಗಲಿ

Last Updated 18 ಜೂನ್ 2014, 19:30 IST
ಅಕ್ಷರ ಗಾತ್ರ

ವಿಜಾಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಬಡ ಕುಟುಂಬದ ಬಾಲಕಿ ಅಕ್ಷತಾ ಅರೆಮುಚ್ಚಿದ ಕೊಳವೆ ಬಾವಿಯೊಳಗೆ ಬಿದ್ದ ಪ್ರಕರಣ  ವರದಿಯಾಗಿದೆ. ಜನಸಾಮಾನ್ಯರಿಗೆ ಕೊಳವೆ ಬಾವಿ ಹಾಕಿಸುವಾಗ ಇದ್ದ ಉತ್ಸಾಹ ನೀರಿನ ಸೆಲೆ ಕಾಣದಿದ್ದಾಗ ಇರುವುದಿಲ್ಲ. ನಿರಾಶೆ­ಗೊಂಡ ಜನ ಕೊಳವೆ ಬಾವಿ ಮುಚ್ಚದೆ ಬೇಜ­ವಾ­ಬ್ದಾರಿ­ತನದಿಂದ ಹಾಗೇ ಬಿಟ್ಟು­ಬಿಡುತ್ತಾರೆ. ಇದು ಮಹಾ­ಪ್ರಮಾದ.

ಎಳೆಯ ಜೀವ­­ಗಳನ್ನು ಬಲಿ­ತೆಗೆದು­ಕೊಳ್ಳುವ ಸಲು­ವಾ­ಗಿ  ಮುಚ್ಚದ ಕೊಳವೆ ಬಾವಿ­ಗಳು ಬಾಯಿ ತೆರೆದು ಕುಳಿತಿರುತ್ತವೆ. ಇಂತಹ ಪ್ರಕ­ರಣ­ಗಳು ತಿಂಗ­ಳ­ಲ್ಲಿ ಒಂದು ಸಲವಾದರೂ ದೇಶ­ದಾದ್ಯಂತ ಸುದ್ದಿ­ಯಾ­ಗು­ತ್ತಲೇ ಇವೆ. ಜಾತಿ, ಧರ್ಮ ಮರೆತು ಉರು­­ಳು­­ಸೇವೆ, ಪ್ರಾರ್ಥ­­ನೆ­­­ಗಳು ವರದಿ­­ಯಾಗು­ತ್ತಿವೆ. ಅಕ್ಷತಾಳಿಗೆ ಮಿಡಿ­ಯದ ಜೀವಗಳೇ ಇಲ್ಲ.

ಮುಖ್ಯವಾಗಿ ದೇಶ­ದಾ­­ದ್ಯಂತ ಕೊಳವೆ ಬಾವಿಯ ನಿಯಮ­ಗಳು ಬಿಗಿ­ಗೊಳ್ಳ­ಬೇಕು. ಅಲ್ಲದೇ ಜನ­ಸಾಮಾನ್ಯರಲ್ಲಿ ಕೊಳ­ವೆ­ಬಾವಿಗಳ ಕುರಿತು ಅರಿವು ಮೂಡಿಸಬೇಕಿದೆ. ಇಂತಹ ಪ್ರಕರಣಗಳು ನಡೆದಾಗ  ಕ್ಷಿಪ್ರ ಕಾರ್ಯಾಚರಣೆ ಪಡೆ ಪ್ರತಿ ಜಿಲ್ಲೆ­ಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT