ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೇಜಿ ಯುವಕರು

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಇಂದಿನ ಯುವಕರಲ್ಲಿ ಬೈಕ್ ಮೋಹ ಅತಿಯಾಗುತ್ತಿದೆ. ಕೆಲವರು ಲಕ್ಷ ರೂಪಾಯಿಯಿಂದ ಹತ್ತಿಪ್ಪತ್ತು ಲಕ್ಷ ರೂಪಾಯಿವರೆಗಿನ ಬೈಕ್‌ಗಳನ್ನು ಕೊಂಡು ಹೆದ್ದಾರಿಗಳಲ್ಲಿ 100– 150 ಕಿಲೊ ಮೀಟರ್‌ ವೇಗದಲ್ಲಿ ಅವುಗಳನ್ನು ಓಡಿಸುತ್ತಿದ್ದಾರೆ. ನಗರ, ಪಟ್ಟಣ, ಹಳ್ಳಿಗಳ ಬಹುತೇಕ ಯುವಕರು ಅತಿ ವೇಗವಾಗಿ ಬೈಕ್‌ ಚಲಾಯಿಸುವುದನ್ನು ಎಲ್ಲೆಡೆ ನೋಡುತ್ತೇವೆ. ಬೈಕ್‌ಗಳ ಸೈಲೆನ್ಸರ್‌ ತೆಗೆದು ಅತಿ ಹೆಚ್ಚು ಸದ್ದು ಮಾಡುತ್ತಾ ವೇಗವಾಗಿ ಓಡಿಸುವುದು ಹಾಗೂ ಆ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯಬೇಕೆಂಬ ಅಸ್ಥಿರ ಬುದ್ಧಿಯ ಯುವಕರು ಹೆಚ್ಚುತ್ತಿದ್ದಾರೆ.

ಬೈಕ್ ಓಡಿಸುತ್ತಲೇ ಮೊಬೈಲ್‌ನಲ್ಲಿ ಮಾತನಾಡುವುದೂ ಹೆಚ್ಚುತ್ತಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಘಾತ ಗ್ಯಾರಂಟಿ. ಬೈಕ್ ಅಪಘಾತಗಳಲ್ಲಿ ಯುವಕರೇ ಹೆಚ್ಚು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಮರೆಯಬಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT