ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಷ್ಠ ಮಿತಿ ಬೇಡ

Last Updated 29 ಫೆಬ್ರುವರಿ 2016, 19:46 IST
ಅಕ್ಷರ ಗಾತ್ರ

ಅಮೆರಿಕದಂತಹ ಕೆಲವು ಮುಂದುವರಿದ ದೇಶಗಳಲ್ಲಿ ಪೊಲೀಸ್ ನೇಮಕಾತಿಗೆ  ವಯಸ್ಸಿನ ಗರಿಷ್ಠ ಮಿತಿಯಿಲ್ಲ, ಕೇವಲ ಕನಿಷ್ಠ ಮಿತಿಯಿದೆ. ಪರೀಕ್ಷೆಗೆ ಕೂರಲು ಕನಿಷ್ಠ 21 ವರ್ಷ ಆಗಿರಬೇಕು. ಆದರೆ ನಮ್ಮಲ್ಲಿ ಗರಿಷ್ಠ ಮಿತಿಯೂ ಇದೆ. ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶ.

ನಮ್ಮಲ್ಲಿ ನೇಮಕಾತಿ ಮೂರು ಹಂತಗಳಲ್ಲಿ ನಡೆಯುತ್ತದೆ. ಇದರಲ್ಲಿ ದೈಹಿಕ ಪರೀಕ್ಷೆಯೂ ಒಂದು. ಅಭ್ಯರ್ಥಿಗೆ ಎಷ್ಟೇ ವಯಸ್ಸಾಗಿದ್ದರೂ ಅವರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಅವರಿಗೆ ಪೊಲೀಸ್ ಆಗಲು ದೈಹಿಕ ಸಾಮರ್ಥ್ಯವಿದೆಯೆಂದೇ ಅರ್ಥ.

ರಾಜ್ಯದಲ್ಲಿ ಪ್ರತಿ ವರ್ಷ ನೇಮಕಾತಿ ನಡೆಸುವ ಅಭ್ಯಾಸ ಇಲ್ಲ. ಹಾಗಾಗಿ ಕೇವಲ ವಯಸ್ಸಿನ ಕಾರಣಕ್ಕಾಗಿ ಬಹುತೇಕ ಅಭ್ಯರ್ಥಿಗಳನ್ನು ಕಣದಿಂದ ಹೊರಗಿಡುವುದು ಅಷ್ಟು ಸಮಂಜಸವಲ್ಲ. 6-7 ವರ್ಷಗಳಿಗೊಮ್ಮೆ ಪರೀಕ್ಷೆ ನಡೆಸಿ 25-26 ವಯಸ್ಸನ್ನು ಗರಿಷ್ಠ ಮಿತಿ ಮಾಡಿದ್ದಾರೆ. ಹೀಗಾಗಿ ಯಾವುದೇ ಅಭ್ಯರ್ಥಿಗೆ ಕೇವಲ ಒಮ್ಮೆ ಅವಕಾಶ ಸಿಗುತ್ತದೆ,ಇನ್ನು ಕೆಲವರಿಗೆ ಅದೂ ಇಲ್ಲ.

ಹಾಗಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ, ವಯಸ್ಸಿನ ಮಿತಿ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬೇಕು ಹಾಗೂ ಅರ್ಹತೆ ಇರುವ ಎಲ್ಲ ಅಭ್ಯರ್ಥಿಗಳಿಗೂ ವಯಸ್ಸಿನ ಮಿತಿ ಹೇರದೆ ಪರೀಕ್ಷೆ ಬರೆಯಲು ಸಮಾನ ಅವಕಾಶ ಒದಗಿಸಿಕೊಡಬೇಕು.

ಅಭ್ಯರ್ಥಿಯ ಸಾಮರ್ಥ್ಯ ಪರೀಕ್ಷಿಸಲು ಆ ನಂತರ ಹೇಗೂ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಗಳು ಇದ್ದೇ ಇರುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT