ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಳ್ಳುವುದೇ?

ಅಕ್ಷರ ಗಾತ್ರ

‘33 ವರ್ಷಗಳ ವಿಚಾರಣೆ!’ (ಪ್ರ.ವಾ., ಮೇ 2)  ಬಳಿಕ ಕೊಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಪ್ರಕರಣ ಗುವಾಹಟಿ ನ್ಯಾಯಾಲಯದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಎಷ್ಟೇ ಗಂಭೀರ ಹಾಗೂ ಗೊಂದಲಮಯವಾಗಿದ್ದರೂ ವಿಚಾರಣೆಗಾಗಿ ನ್ಯಾಯಾಲಯ ಅತೀ ದೀರ್ಘ ಸಮಯ ತೆಗೆದು ಕೊಂಡಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ.

ಲಕ್ಷಗಟ್ಟಲೆ ಪ್ರಕರಣಗಳು ವಿಚಾರಣೆಯ ಹಂತದಲ್ಲಿಯೇ ಕೊಳೆಯುತ್ತಿರುವುದನ್ನು ನೆನೆದು, ಇತ್ತೀಚೆಗೆ  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದು  ಸುದ್ದಿಯಾಗಿದೆ.   ಅಸಹಾಯಕತೆ, ಹತಾಶೆ, ಸಕಾಲದಲ್ಲಿ ನ್ಯಾಯವನ್ನು ನೀಡಲಾಗದ ನೋವು, ಕಣ್ಣೀರಿಗೆ ಕಾರಣಗಳೆಂದು ತಿಳಿದು ಬಂದಿದೆ.

ನ್ಯಾಯಮೂರ್ತಿ ಕಣ್ಣೀರು ಸುರಿಸಿದ್ದರ ಬಗ್ಗೆ ಮೋದಿಯವರು ಮರುಕ ವ್ಯಕ್ತಪಡಿಸಿರಬಹುದು. ಆದರೆ ಅದಕ್ಕೆ ಪರಿಹಾರ ಒದಗಿಸುವುದು ಅಷ್ಟು ಸುಲಭದ ಮಾತಲ್ಲವೆಂದು ಅವರಿಗೆ ಗೊತ್ತಿದೆ!

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಪ್ರಮುಖ ಅಂಗಗಳೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವುಗಳಲ್ಲಿ ನ್ಯಾಯಾಂಗವು ನಿಶ್ಶಕ್ತಿಯಿಂದ ಬಳಲುವ ವ್ಯಕ್ತಿಯ ಹಾಗೆ ಹಾಸಿಗೆಯಲ್ಲಿ ಮಲಗಿದಂತಿದೆ! ನ್ಯಾಯದಾನ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ಗಂಭೀರವಾಗಿ ಚಿಂತಿಸಲು ಇದು ಸಕಾಲ.

ಕಣ್ಣೀರು ದೌರ್ಬಲ್ಯ  ಹಾಗೂ ನಿಸ್ಸಹಾಯಕತೆಯ ಸಂಕೇತವೇ ಹೊರತು, ಅದು ಪರಿಹಾರವಲ್ಲ! ಪ್ರಜ್ಞಾವಂತರಾದ ನ್ಯಾಯಮೂರ್ತಿಗಳು ಕಣ್ಣೀರು ಸುರಿಸುವ ಬದಲು, ನ್ಯಾಯದಾನ ವಿಳಂಬ ನಿವಾರಿಸುವ ಪರಿಹಾರೋಪಾಯಗಳನ್ನು ಪ್ರಧಾನಿಯವರಿಗೆ, ರಾಷ್ಟ್ರಪತಿಗೆ ಸೂಚಿಸಬಹುದಿತ್ತಲ್ಲವೇ?!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT