ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತೋಹಾರಿ ಕ್ರೀಡೆ

Last Updated 21 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ವೃತ್ತಿಪರ ಕಬಡ್ಡಿ ಲೀಗ್ ಪಂದ್ಯಗಳಿಗೆ ಈಗೀಗ ಸಿಗುತ್ತಿರುವ ಪ್ರೋತ್ಸಾಹವನ್ನು ನೋಡಿದರೆ ದೇಸಿ ಕ್ರೀಡೆಗಳ ಬಗ್ಗೆ ಭರವಸೆ ಮೂಡುತ್ತದೆ.  ಇಂತಹ ಚೇತೋಹಾರಿ ದೇಸಿ ಕ್ರೀಡೆಗಳು ಇನ್ನೂ ಹೆಚ್ಚು ಜನಪ್ರಿಯವಾಗಬೇಕು.

ಪ್ರೊ ಕಬಡ್ಡಿ ಲೀಗ್‌ನ  ಪ್ರತಿ ತಂಡದಲ್ಲೂ ವಿದೇಶಿ ಆಟಗಾರರಿಗೆ ಅವಕಾಶ ಇರುವುದು ಗಮನಾರ್ಹ. ಅಂತಹ ಆಟಗಾರರಲ್ಲಿ ಪಟ್ನಾ ಪೈರೇಟ್ಸ್ ಪರ ಆಡುತ್ತಿರುವ ದಕ್ಷಿಣ ಕೊರಿಯಾದ 32ರ ಹರೆಯದ ಟೀ ಡೇಕ್ ಯೋಮ್ ಎಂದರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಮಾಜಿ ಟೇಕ್ವಾಂಡೊ ಮತ್ತು ಕುಸ್ತಿ ಪಟುವೂ ಆಗಿರುವ ಅವರು  ಏಳು ವರ್ಷಗಳಿಂದಷ್ಟೇ ಕಬಡ್ಡಿ ಅಂಕಣಕ್ಕೆ ಸಾಮಾನ್ಯ ಆಟಗಾರನಾಗಿ ಕಾಲಿಟ್ಟು ಕಳೆದ ವರ್ಷದ ಏಷ್ಯನ್‌ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿದ ದಕ್ಷಿಣ ಕೊರಿಯಾ ಕಬಡ್ಡಿ ತಂಡದ ನಾಯಕರಾಗಿದ್ದರು.

ಅಂಕಣದಲ್ಲಿ ಚುರುಕಾಗಿ ಓಡಾಡುತ್ತ, ಅವಕಾಶ ಸಿಕ್ಕಲ್ಲಿ ಟೇಕ್ವಾಂಡೊ ಮಾದರಿಯ ಕಾಲು ಒದೆತ, ಟ್ಯಾಕ್ಲಿಂಗ್‌ನಲ್ಲಿ ಕುಸ್ತಿ ಪಟುವಿನಂತೆ ಎದುರಾಳಿಯನ್ನು ಹಿಡಿದು ಬೀಳಿಸುವ ಪರಿ ನೋಡುಗರಿಗೆ ಅಚ್ಚರಿಯ ಜೊತೆಗೆ ಕಬಡ್ಡಿಯನ್ನು ತ್ರೀ-ಇನ್-ಒನ್ ಆಟವನ್ನಾಗಿಸಿ ಮನರಂಜನೆಯನ್ನೂ ಒದಗಿಸುತ್ತದೆ. 

ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆ ಈ ಕ್ರೀಡೆಗೆ ಭಾರತದಲ್ಲಿ ಹೊಸ ಆಯಾಮ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT