ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಟ್ಲಿ ಮೇಲಿನ ಹೊರೆ ಇಳಿಸಲಿ

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅರುಣ್‌ ಜೇಟ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇದೆ.

ಅಧಿಕ ರಕ್ತ­ದೊ­ತ್ತಡ ಹಾಗೂ ಮಧುಮೇಹದಿಂದ  ಬಳಲುತ್ತಿರುವ ಸಚಿವರಿಗೆ ಈ ಸಮಸ್ಯೆ ಉಲ್ಬಣ­ವಾಗಿರು­ವು­ದಕ್ಕೆ ಹಣ­ಕಾಸು ಮತ್ತು ರಕ್ಷಣಾ ಖಾತೆಗಳ ಹೊರೆಯೂ ಕಾರಣ ಆಗಿರಬಹುದು. ಪಶ್ಚಿಮದ ಗಡಿಯಲ್ಲಿ ಪಾಕಿಸ್ತಾನ­ದಿಂದ ಆಗುತ್ತಿರುವ ಕಿರಿಕಿರಿ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ದಾರಿಗೆ ತರುವ ಎರಡು ಮಹತ್ತರವಾದ ಜವಾ­ಬ್ದಾರಿ ಅವರ ಮೇಲಿದೆ. ಐದು ವಾರಗಳ ಆಸ್ಪತ್ರೆ ವಾಸದ ಬಳಿಕ ಸಚಿವರು ಇತ್ತೀಚೆಗಷ್ಟೇ ಮರಳಿದ್ದಾರೆ. ಹಣಕಾಸು ಹಾಗೂ ದೇಶದ ಭದ್ರತೆ– ಇವರೆಡೂ ಅತ್ಯಂತ ಮಹತ್ವದ ಜವಾಬ್ದಾರಿಗಳಾದ್ದರಿಂದ, ಪ್ರಧಾನಿಯವರು ಜೇಟ್ಲಿ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ಇಳಿಸಿದರೆ ಸೂಕ್ತ. ಅನವಶ್ಯಕವಾಗಿ ಪರೀಕ್ಷೆ ಮಾಡುವುದು ಬೇಡ – ಜೇಟ್ಲಿಯವರ ಪ್ರಾಮಾಣಿಕ ಸೇವೆ ಭಾರತಕ್ಕೆ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT