ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಇಡಿ ಪದವೀಧರರ ಗೋಳು ನಿವಾರಿಸಿ

ಅಕ್ಷರ ಗಾತ್ರ

ರಾಜ್ಯದಲ್ಲಿ 3 ರಿಂದ 4 ಲಕ್ಷದಷ್ಟಿರುವ ಡಿ.ಇಡಿ ಪದವೀಧರರ ಗೋಳು ಹೇಳತೀರದು. ಡಿ.ಇಡಿ ಒಂದು ವೃತ್ತಿ ಶಿಕ್ಷಣ ಕೋರ್ಸ್. ಆದರೆ ಡಿ.ಇಡಿ ಪದವೀಧರರಿಗೆ ವೃತ್ತಿಯೇ ಇಲ್ಲದಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳಷ್ಟಿದ್ದರೂ ಬರೀ 4,000 ಪ್ರಾಥಮಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಗತ್ಯಂತರ ಇಲ್ಲದೆ ಡಿ.ಇಡಿ ಪದವೀಧರರು ಗ್ರಾಮಲೆಕ್ಕಿಗ, ಪೊಲೀಸ್ ಮುಂತಾದ ಹುದ್ದೆಗಳಿಗೆ ಸೇರಿಕೊಂಡಿದ್ದಾರೆ. ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯೋಗವನ್ನೇ ನೀಡದೇ ಇದ್ದರೆ ಡಿ.ಇಡಿ ಕೋರ್ಸನ್ನು ಮುಂದುವರಿಸುವುದರಲ್ಲಿ ಅರ್ಥ ಏನಿದೆ?

ಸಾವಿರಾರು ಮಂದಿ ಡಿ.ಇಡಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ಬಿಟ್ಟರೆ ಬೇರೆ ಕಡೆ ಕೆಲಸ ಸಿಗುವುದಿಲ್ಲ. ಹೀಗಾಗಿ ಕೆಲವರು ಪಾನ್ ಬೀಡಾ ಅಂಗಡಿ, ಗೂಡು ಅಂಗಡಿಗಳನ್ನು ಇಟ್ಟುಕೊಂಡು ಹೊಟ್ಟೆ ಹೊರೆಯುವ ಸ್ಥಿತಿ ಒದಗಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT