ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹೊರೆ ಭಾಗ್ಯ

Last Updated 21 ಮಾರ್ಚ್ 2016, 19:48 IST
ಅಕ್ಷರ ಗಾತ್ರ

ಈ ಬಾರಿಯ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ಟಿ.ವಿ. ಕೇಬಲ್ ಶುಲ್ಕ ಏರಿಸುವ ಮೂಲಕ ಮಧ್ಯಮ ವರ್ಗದವರಿಗೆ ಬರೆ ಎಳೆಯಲಾಗಿದೆ. ಮೋಟಾರು ವಾಹನ ತೆರಿಗೆ, ಮೌಲ್ಯವರ್ಧಿತ ತೆರಿಗೆ ಹೆಚ್ಚಳ ಬಹುಸಂಖ್ಯಾತ ವರ್ಗದವರಿಗೆ ಹೆಚ್ಚಿನ ಬಿಸಿ ಮುಟ್ಟಿಸುತ್ತದೆ.

ಶೂನ್ಯ ಬಡ್ಡಿ ದರದೊಂದಿಗೆ ಕೃಷಿ ಸಾಲ ವಿತರಣೆ ಮುಂದುವರಿಸುವುದಾಗಿ ಹೇಳಲಾಗಿದೆ. ಸಾಲ ಶೂಲ ಎಂಬ ಗಾದೆ ಎಂದೂ ಸುಳ್ಳಾಗಿಲ್ಲ. ರೈತರನ್ನು ಸಾಲಗಾರರನ್ನಾಗಿ ಮಾಡಿ ಆತ್ಮಹತ್ಯೆ ಬಾಗಿಲಿಗೆ ತಳ್ಳುವುದಕ್ಕಿಂತ, ನ್ಯಾಯಸಮ್ಮತವಾದ ಬೆಲೆಯಲ್ಲಿ ಕೃಷಿಗೆ ಬೇಕಾದ ಪದಾರ್ಥಗಳನ್ನು ಪೂರೈಸಿದಲ್ಲಿ ರೈತ ಬಹುಮಟ್ಟಿಗೆ ಸ್ವಾವಲಂಬಿಯಾಗಬಹುದು.

ಸಾಲ ಹೊತ್ತವರು ಯಾರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಯಾರಿಗೂ ಬೇಡವಾದ ತೆರಿಗೆ ಭಾಗ್ಯವಂತೂ ಜನಸಾಮಾನ್ಯನಿಗೆ ಒಲಿದು ಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT