ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಾರೋಹಣದ ನಿತ್ಯ ಉತ್ಸವ ಬೇಡ

Last Updated 30 ಸೆಪ್ಟೆಂಬರ್ 2013, 20:07 IST
ಅಕ್ಷರ ಗಾತ್ರ

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಗಳಂದು ನಡೆಯುವ ಧ್ವಜಾರೋಹಣ ನಿತ್ಯ ನಡೆಯುವ ಸಾಮಾನ್ಯ ಕ್ರಿಯೆಗಳಾಗಬೇಕೆ? ನಿತ್ಯ ಧ್ವಜಾರೋಹಣದಿಂದ ಸಿಬ್ಬಂದಿ ವರ್ಗದಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಮೂಡಿ ಶಿಸ್ತು ಮತ್ತು ದಕ್ಷತೆ ಬಂದರೆ ಒಳ್ಳೆಯದೇ. ಆದರೆ ವರ್ಷದ ಎರಡು ದಿನ ನಡೆಯುವ  ಧ್ವಜಾ ರೋಹಣದಲ್ಲಿ ಪಾಲ್ಗೊಳ್ಳಲೂ ಆಸಕ್ತಿ ತೋರ ದವರಿರುವಾಗ ನಿತ್ಯ ಧ್ವಜಾರೋಹಣ ನಿತ್ಯದ ಉತ್ಸವವಾಗುವುದೇ.

80ರ ದಶಕದವರೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನದ ಕೊನೆಯಲ್ಲಿ ರಾಷ್ಟ್ರಗೀತೆ ರೆಕಾರ್ಡ್ ಹಾಕಲಾಗುತ್ತಿತ್ತು. ಮೊದಮೊದಲು ರಾಷ್ಟ್ರಗೀತೆ ಶುರುವಾಗುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು. ಬರಬರುತ್ತ ಅದು ಯಾಂತ್ರಿಕ, ಕಾಟಾಚಾರ ಎನಿಸ ತೊಡಗಿತು. ಅದರಿಂದಾಗಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ರೆಕಾರ್ಡ್‌ ಹಾಕುವುದು ನಿಂತಿತು.

ನಿತ್ಯ ಧ್ವಜಾರೋಹಣವೂ ಹಾಗೇ ಆಗ ಬಹುದು. ಅಲ್ಲದೇ ನಿತ್ಯ ಧ್ವಜಾರೋಹಣದಿಂದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನ ನಡೆಯುವ ಧ್ವಜಾರೋಹಣದ ಮಹತ್ವ ಕಡಿಮೆಯಾಗುತ್ತದೆ. ಸರ್ಕಾರಿ ಸಿಬ್ಬಂದಿಗೆ ಏನೇನೋ ರೂಪದಲ್ಲಿ ಎಷ್ಟೆಷ್ಟೋ ಉತ್ತೇಜನ ನೀಡಿದರೂ ಅವರಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ, ಶಿಸ್ತು, ದಕ್ಷತೆ ಬರಲಾರದು.

ಏಕೆಂದರೆ ಹೊರಗಿನಿಂದ ನೀಡುವ ಉತ್ತೇಜನ ವಾಹನಗಳಿಗೆ ಇಂಧನದಂತೆ. ಅದು ಮುಗಿದಾಗ ಮತ್ತೆ ಹಾಕಬೇಕಾಗುತ್ತದೆ. ನಿಜವಾದ ಉತ್ತೇಜನ ಒಳಗಿನಿಂದ ಬರಬೇಕು. ಒಳಗಿನ ಕುಲುಮೆ ಆರಿರುವಾಗ ಹೊರಗಿನ ಉತ್ತೇಜನದಿಂದ ಏನು ಪ್ರಯೋಜನ?
– ಮಾಣಿಕರಾವ ಪಸಾರ. ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT