ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ ವಿಳಂಬ

Last Updated 12 ಏಪ್ರಿಲ್ 2015, 19:36 IST
ಅಕ್ಷರ ಗಾತ್ರ

ಕಾರ್ಮಿಕ ನ್ಯಾಯಾಲಯಗಳು ಈಗ ನಾಲ್ಕೈದು ಜಿಲ್ಲೆ ಗೊಂದರಂತೆ ಕಾರ್ಯ ನಿರ್ವಹಿಸುತ್ತಿವೆ.  ನಿರ್ದಿಷ್ಟ ಜಿಲ್ಲೆಗೆ ಸೇರಿದ ಕಾರ್ಮಿಕರ ಪ್ರಕರಣಗಳನ್ನು ಸಂಬಂಧಿಸಿದ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಎರಡು–ಮೂರು  ತಿಂಗಳಿಗೊಮ್ಮೆ ಆಯಾ ಜಿಲ್ಲೆಗೆ ಹೋಗಿ ತೀರ್ಮಾನಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆ ಪ್ರಕಾರ ಶಿವಮೊಗ್ಗಕ್ಕೆ ಮಂಗಳೂರು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಎರಡು–ಮೂರು  ತಿಂಗಳಿಗೊಮ್ಮೆ  ಬಂದು ಈ ಜಿಲ್ಲೆಗೆ ಸಂಬಂಧಿಸಿದ ಕಾರ್ಮಿಕ ಮೊಕದ್ದಮೆಗಳನ್ನು ಎರಡು–ಮೂರು ದಿವಸ ಶಿವಮೊಗ್ಗದಲ್ಲೆ ಕ್ಯಾಂಪ್‌ ನಡೆಸಿ ತೀರ್ಮಾನಿಸುತ್ತಿದ್ದರು.

ಆದರೆ ಕಳೆದ ಎರಡು–ಮೂರು ವರ್ಷಗಳಿಂದ ಮಂಗಳೂರು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಶಿವಮೊಗ್ಗಕ್ಕೆ ಬರದೆ ಈ ಜಿಲ್ಲೆಯ ಕಾರ್ಮಿಕರ ಮೊಕದ್ದಮೆಗಳು ತೀರ್ಮಾನವಾಗದೆ ಉಳಿದಿವೆ.  ಕಾರ್ಮಿಕರು ಪರಿಹಾರವಿಲ್ಲದೆ ತೊಳಲುತ್ತಿದ್ದಾರೆ.  ಕಾರ್ಮಿಕ ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರ ದರ್ಜೆಯ ನ್ಯಾಯಾಧೀಶರಾಗಿರುವುದು ನಿಯಮದ ಪ್ರಕಾರ ಕಡ್ಡಾಯವಾಗಿರುತ್ತದೆ. ಆದರೆ ಕೆಲಸದ ಒತ್ತಡದಿಂದಲೋ ಇಲ್ಲವೆ ನ್ಯಾಯಾಧೀಶರ ಕೊರತೆ ಯಿಂದಲೋ ಕಾರ್ಮಿಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸದೆ ಕಾರ್ಮಿಕರು ಕಷ್ಟ–ನಷ್ಟ ಅನುಭವಿಸುತ್ತಿದ್ದಾರೆ.  ಮನೆ ಬಾಗಿಲಿಗೆ ನ್ಯಾಯ ಎಂಬ ಲೋಕ ಅದಾಲತ್‌ ವ್ಯವಸ್ಥೆ ಕಾರ್ಮಿಕ ನ್ಯಾಯಾಲಯದ ಮಟ್ಟಿಗೆ ಒಂದು ಅಣಕು ವ್ಯವಸ್ಥೆ ಆಗಿದೆ.

ಸದ್ಯ ಪ್ರತಿ ಜಿಲ್ಲೆಯಲ್ಲಿ 2–3 ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.  ಕಾರ್ಮಿಕ ನ್ಯಾಯಾಲಯದಲ್ಲಿ ಈಗ ಬಾಕಿ ಉಳಿದಿರುವ ಮೊಕದ್ದಮೆಗಳನ್ನು ಸಂಬಂಧಿಸಿದ ಜಿಲ್ಲಾ  ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಲು ವಕಾಶವಾಗುವಂತೆ  ಕಾನೂನಿಗೆ ಸೂಕ್ತ ತಿದ್ದುಪಡಿ ತಂದರೆ ಒಳ್ಳೆಯದು. ಆಯಾ ಜಿಲ್ಲೆಯ ಕಾರ್ಮಿಕರ ಮೊಕದ್ದಮೆಗಳನ್ನು ಆಯಾ ಜಿಲ್ಲಾ ನ್ಯಾಯಾ
ಧೀಶರೇ ತೀರ್ಮಾನಿಸಲು ವ್ಯವಸ್ಥೆ ಮಾಡಿದರೆ, ಹಲವಾರು ವರ್ಷಗಳಿಂದ ಪರಿಹಾರ ಕಾಣದಿರುವ ಪ್ರಕರಣಗಳು ಇತ್ಯರ್ಥವಾಗುತ್ತವೆ.   ಸಂಬಂಧಿಸಿದವರು ಈ ಬಗ್ಗೆ ಗಂಭೀರವಾಗಿ ಚಿಂತಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT