ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಮಾರ್ಗ ಹುಡುಕಿ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ  ಸಹಜವಾಗಿ ಕೆಲವು ಕನ್ನಡ ಸಂಘಟನೆ­ಗಳು ಹಾಗೂ ಸಾಹಿತಿ ವಲಯ ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಚಿಂತನೆಯಲ್ಲಿದೆ. ಇಂತಹ ಅರ್ಜಿ­ಯನ್ನು ವರಿಷ್ಠ ನ್ಯಾಯಾಲಯ ತಿರಸ್ಕ­ರಿಸುವ ಸಾಧ್ಯತೆಗಳೇ ಹೆಚ್ಚು. ಈ ಸಂಗತಿ ಕಾನೂನು ಪಂಡಿತರು ಹಾಗೂ ಸರ್ಕಾರಕ್ಕೆ ಗೊತ್ತಿದ್ದರೂ ಅಂತಹ ಅರ್ಜಿ­ಯನ್ನು ಅನಿವಾರ್ಯವಾಗಿ ದಾಖಲಿಸಬೇಕಾಗುತ್ತದೆ.

ಈ ಮಧ್ಯೆ ಕನ್ನಡ ಬೆಳವಣಿಗೆಗೆ ‘ಪರ್ಯಾಯ’ ಮಾರ್ಗಗಳನ್ನು ಕಂಡು­ಕೊಳ್ಳು­­ವುದು ಅಪೇಕ್ಷಣೀಯ ಹಾಗೂ ಜಾಣತನ. ಪ್ರೌಢ ಶಿಕ್ಷಣ, ಕಾಲೇಜು, ಪದವಿ ಶಿಕ್ಷಣ ಹಾಗೂ ಪ್ರೊಫೆಷನಲ್‌ ಶಿಕ್ಷಣದಲ್ಲಿ ಕನ್ನಡವನ್ನು ‘ಒಂದು ಭಾಷೆ’ಯಾಗಿ ಕಡ್ಡಾಯಗೊಳಿಸಿ, ಅದರಲ್ಲಿಯೂ ತೇರ್ಗಡೆ­ಯಾಗು­ವಂತಹ ನಿಯಮವನ್ನು ಜಾರಿಗೆ ತರಬೇಕು. ಈ ಕ್ರಮ ಅನುಸರಿಸಿದಲ್ಲಿ ಕನ್ನಡ ‘ತಂತಾನೆ’ ಬೆಳೆಯುತ್ತದೆ. ಸಾಹಿತಿಗಳು ಶಂಕೆ ಪಡುವಂತೆ ಕನ್ನಡ ಅಳಿಸಿ ಹೋಗುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT