ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಖರೀದಿ ನಿಲುಗಡೆ!

Last Updated 1 ಜುಲೈ 2014, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯಾ ವರ್ಷ ಪ್ರಕಟವಾದ ಪುಸ್ತಕಗಳನ್ನು ಆಯ್ಕೆ ಮಾಡಿ, ‘ಏಕಗವಾಕ್ಷಿ’ ಯೋಜನೆಯಡಿ ಖರೀ­ದಿಸುತ್ತಿತ್ತು. ಇದರಿಂದ ಲೇಖಕ, ಪ್ರಕಾಶಕರಿಗೆ ಬಹಳ ಅನುಕೂಲ ಆಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಖರೀದಿ ನಿಂತಿದೆ.

2011 ರಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಪಟ್ಟಿ­ಯನ್ನು ಇಲಾಖೆ ಸಿದ್ಧಪಡಿಸಿದೆ. ಆದರೆ, ಖರೀದಿ ಆದೇಶ ನೀಡಿಲ್ಲ! ಈ ಸಂಬಂಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ: ‘ಸರ್ಕಾರ­ದಿಂದ ಅನುದಾನ ಬಂದಿಲ್ಲ; ಆದ್ದರಿಂದ ಖರೀದಿ­ಸಿಲ್ಲ’ ಎಂಬ ಉತ್ತರ ಬಂತು.

ಆದ್ದರಿಂದ ಗ್ರಂಥಾ­ಲಯ ಇಲಾಖೆಗೆ ಸಂಬಂಧಿಸಿದ ಸಚಿವರು ಈ ವಿಷಯವನ್ನು ಗಮನಿಸಿ, ಇಲಾಖೆಗೆ ಅನುದಾನ ಬಿಡುಗಡೆ ಮಾಡಿ, ಪುಸ್ತಕಗಳ ಖರೀದಿಗೆ ನೆರವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT