ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ವಿಸ್ಮಯವೇ ಹೀಗೆ!

Last Updated 5 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಈ ಪ್ರಕೃತಿ ಮಾತೆಯೇ ಹೀಗೆ. ಆಕೆಯ ನಡೆ ನಿಗೂಢ ಮತ್ತು ತರ್ಕಕ್ಕೆ ನಿಲುಕಲಾರದ್ದು. ನಮ್ಮ ರಾಜ್ಯದ ಚಿತ್ರಣವನ್ನೇ  ನೋಡಿ: ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶ ಮಳೆಗಾಗಿ ಆಕಾಶದತ್ತ ಮುಖ ಮಾಡಿರುವುದು ಒಂದೆಡೆ­ಯಾದರೆ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಿಂದ  ಈ ಭಾಗದ ಜಲಾಶಯಗಳೆಲ್ಲ ಭರ್ತಿಯಾಗಿ ಅಪಾರ ಪ್ರಮಾಣದ ನೀರು ಹರಿದು ಸಾಗರ ಸೇರುತ್ತಿದೆ. ನೆರೆ ಭೀತಿಯಿಂದ ನದಿ ಪಾತ್ರದ ಜನ ಪ್ರಾಣ ಉಳಿಸಿಕೊಳ್ಳಲು ಮನೆ ಮಠ ತೊರೆದು ಹೋಗಬೇಕಾದ ಅನಿವಾರ್ಯ ಬಂದೊದಗಿದೆ.

ಮುಂಗಾರು ವೈಫಲ್ಯದ ಹೊಡೆತದಿಂದ ನಲುಗಿರುವ ರೈತರು, ಎಲ್ಲೋ ಬಿದ್ದ ಮಳೆಯ ನೆರೆಯಿಂದ ತಪ್ಪಿಸಿಕೊಳ್ಳಲು  ಮನೆ ಮಾರು ತ್ಯಜಿಸಬೇಕಾಗಿದೆ. ಒಟ್ಟಿನಲ್ಲಿ ಕಂಗಾಲಾದ ರೈತನ ಬಾಳು ಶೋಚನೀಯ.   ನಿಸರ್ಗದ ನಿಯಮ ವನ್ನು ಪ್ರಶ್ನಿಸಲು ನಾವು ಯಾರು? ಆಕೆಯಲ್ಲಿ ‘ದಯೆ ತೋರು ಮಾತೆ’ ಎಂದು ದೀನರಾಗಿ ಬೇಡುವುದೊಂದೇ ನಮಗೆ ಉಳಿದ ಮಾರ್ಗ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT