ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ

Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಚೀಲಗ­ಳದ್ದೇ ಕಾರುಬಾರು. ಈ ಕೊಳೆ­ಯದ ಕಸ ಹೆಚ್ಚಾ­ಗುತ್ತಿದ್ದಂತೆ ರೋಗ-ರುಜಿನಗಳೂ ಅಧಿಕ­ವಾಗು­­ತ್ತವೆ. ಇದು ಅರಿವಿಗೆ ಬಂದರೂ ಅದನ್ನು ಪಾಲಿಸಲಾರದಷ್ಟು ಅಜ್ಞಾನಿಗಳಾಗಿ­ದ್ದೇವೆ. ಪ್ಲಾಸ್ಟಿಕ್‌ ಕೊಳೆಯದ ತ್ಯಾಜ್ಯವಾದ್ದರಿಂದ ಅದನ್ನು ಸುಟ್ಟು ಹಾಕಲಾರದೆ, ಉಳಿಸಿಕೊ­ಳ್ಳಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದೇವೆ.

ಇತ್ತೀಚೆಗಂತೂ ಅಂಗಡಿಗಳ ಮುಂದೆಲ್ಲ ಬರೀ ಪ್ಲಾಸ್ಟಿಕ್ ಚೀಲಗಳೇ ತುಂಬಿರುತ್ತವೆ. ಗಾಳಿಯಲ್ಲಿ ತೂರಾಡುತ್ತಾ ಎಲ್ಲೆಂದ­ರಲ್ಲಿ ತೂರಿಕೊಂಡು, ಜನರಿಗೆ ತೊಂದರೆ ಕೊಡುತ್ತವೆ. ಹೀಗಿ­ದ್ದರೂ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ಯಾಕೆ ಸಂಪೂರ್ಣವಾಗಿ ನಿಷೇಧಿಸುತ್ತಿಲ್ಲ?

ಹಿಂದೆ ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಹಲಸಿನ ಎಲೆಗಳಿಂದ ಮಾಡಿದ ಇಸ್ತ್ರಿ ಎಲೆ, ಬಾಳೆ ನಾರುಗಳ ಜೊನ್ನೆಗಳನ್ನೇ ಬಳಸು­ತ್ತಿದ್ದರು. ತರಕಾರಿಗಳನ್ನು ತರಲು ಬಟ್ಟೆ ಅಥವಾ ರಟ್ಟಿನ ಬ್ಯಾಗನ್ನು ಉಪಯೋಗಿಸು­ತ್ತಿದ್ದರು. ಕೆರೆಗ­ಳಲ್ಲಿ ಬೆಳೆಯು­ತ್ತಿದ್ದ ತಾವರೆ ಎಲೆಗಳನ್ನು ಮಾಂಸ ಕಟ್ಟಲು, ಹೂ ಕಟ್ಟಲು ಬಳಸುತ್ತಿದ್ದರು.

ಈಗ ಇಂತಹ ಎಲ್ಲ ಕೆಲಸಗಳಿಗೂ ಪ್ಲಾಸ್ಟಿಕ್ ಕವರ್‌ಗಳೇ ಬಳಕೆಯಾ­ಗುತ್ತಿವೆ. ಚಿಲ್ಲರೆ ಅಂಗಡಿಗಳಲ್ಲಿ ದೊರೆ­ಯುವ  ಕುರುಕಲು ತಿಂಡಿಗಳೂ ಪ್ಲಾಸ್ಟಿಕ್ ಚೀಲ ಬೇಕಾ­ಗಿವೆ. ಹೋಟೆಲ್‌ಗಳಲ್ಲಿ ಊಟ ಕಟ್ಟುವು­ದಕ್ಕೆ, ಕಾಫಿ, ಟೀ ಕೊಡುವುದಕ್ಕೆ ಸಹ ವ್ಯಾಪಕವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಕಚೇರಿ­ಗಳಲ್ಲಿ ಟೀ, ಕಾಫಿ ಕುಡಿಯಲು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಲೋಟಗಳ ಸಣ್ಣಗುಡ್ಡೆವೇ ಕಾಣ­ಸಿಗುತ್ತವೆ.

ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟರೆ ಅದರಲ್ಲಿನ ವಿನಾಶ­ಕಾರಿ ರಾಸಾಯನಿಕ ಗಾಳಿ­ಯಲ್ಲಿ ವಿಲೀನವಾಗಿ, ಎಲ್ಲ ಜೀವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಮೊದಲು ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು.  ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಸವನ್ನು ದಾರಿಯಲ್ಲಿ ಬಿಸಾಡದೆ ಕಸದ ಡಬ್ಬಿಗಳಲ್ಲೇ ಹಾಕುವಂತೆ ತಾಕೀತು ಮಾಡ­ಬೇಕು. ಹಾಗಾದಲ್ಲಿ ಮಾತ್ರ ನಮ್ಮದು ಪ್ಲಾಸ್ಟಿಕ್‌ ಹಾಗೂ ಕಸಮುಕ್ತ ರಾಜ್ಯವಾಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT