ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಬರೆ, ದೊಡ್ಡವರಿಗೆ ರಿಯಾಯ್ತಿ

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಾರ್ಪೊ­ರೇಟ್ ಸಾಲಗಳ ಪುನರ್-ರಚನೆ (ಸಿಡಿಆರ್)  ಮಾಡುವ ಒಂದು ದೊಡ್ಡ ಮಾಫಿಯಾ  ಇದ್ದು  ಅದು ಎಲ್ಲಾ ಸಾರ್ವಜನಿಕ ರಂಗದ  ಬ್ಯಾಂಕುಗಳನ್ನು ಗೆದ್ದಲಿನಂತೆ ಒಳಗಿಂ­ದೊ­ಳಗೇ ಕೊರೆದು ಟೊಳ್ಳು ಮಾಡುತ್ತಿದೆ.

ಇತ್ತೀಚಿನವರೆಗೆ ಎರಡೂವರೆ ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿ  ಬೃಹತ್ ಕಂಪೆನಿಗಳ ಸಾಲಗಳನ್ನು ಸಿಡಿಆರ್ ಅಡಿ ತರ­ಲಾಗಿದ್ದು  ಇದಕ್ಕಾಗಿ ಸುಮಾರು ರೂ. 25 ಸಾವಿರ ಕೋಟಿ ಬಡ್ಡಿ ಮನ್ನಾ ಮಾಡ­ಲಾಗಿದೆ.

  ಇದರಲ್ಲಿ ಶೇ 20ರಷ್ಟು  ಅಂದರೆ ಸುಮಾರು ರೂ. 5,000 ಕೋಟಿಯಷ್ಟು ರಾಷ್ಟ್ರೀ­ಕೃತ ಬ್ಯಾಂಕುಗಳ ಉನ್ನತಾಧಿಕಾರಿ­ಗಳ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳ ಕಿಸೆಗೆ ಸೇರಿದೆ ಎಂಬ ಆಪಾದನೆ­ಯಿದೆ. ಒಬ್ಬ ಬಡ ರೈತನಿಗೆ  ಜುಜುಬಿ ಒಂದೆ­ರಡು ಸಾವಿರ ರೂಪಾಯಿ  ಸಾಲ ಮನ್ನಾ ಮಾಡಲು ನೂರಾರು ನಿಬಂಧನೆ ಹಾಕುವ ರಾಷ್ಟ್ರೀಕೃತ  ಬ್ಯಾಂಕು­ಗಳು ದೊಡ್ಡ ದೊಡ್ಡ ಕಂಪೆನಿ­ಗಳ ಕೋಟ್ಯಂತರ ರೂಪಾಯಿ  ಸಾಲ ಮನ್ನಾ ಮಾಡಲು ತಕ್ಷಣ  ತಯಾರಾಗುತ್ತವೆ.

ಮುಂಬೈ ಮತ್ತು ಉತ್ತರ ಭಾರತದ ಬ್ಯಾಂಕುಗಳಲ್ಲಿ ಈ ಸಿಡಿಆರ್ ಎಂಬ ಮೋಸ ಅತೀ ಹೆಚ್ಚು. ದಕ್ಷಿಣ ಭಾರತದ ಬ್ಯಾಂಕು­ಗಳಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಇನ್ನೂ ಉಳಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT