ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಕದಡಿತು

ಅಕ್ಷರ ಗಾತ್ರ

ರಾಜ್ಯದ ಸೌಮ್ಯ ಸ್ವಭಾವದ ಕೆಲವೇ  ನಾಯಕರಲ್ಲಿ ಡಾ. ಜಿ. ಪರಮೇಶ್ವರರೂ ಒಬ್ಬರು. ಬೆಂಗಳೂರಿನಲ್ಲಿ ನಡೆದ ‘ಸಾರ್ಥಕ ಸಮಾವೇಶ’ದಲ್ಲಿ ದಲಿತರ ಸ್ಥಿತಿ ಬಗ್ಗೆ ಅವರು ಹೇಳಿದ ಮಾತು ಮನ ಕದಡಿತು.  ದಲಿತನಾಗಿ ಬಾಲ್ಯದ ದಿನಗಳನ್ನು ನೆನೆಯುತ್ತಾ ಕ್ಷೌರದ ಅಂಗಡಿಯವರು ತಮ್ಮ ಸಮುದಾಯದ ಜನರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದುದರಿಂದ, ತಮ್ಮ ತಂದೆಯೇ ತಮಗೆ ಕ್ಷೌರ ಮಾಡುತ್ತಿದ್ದರು ಎಂದೂ, ಅನ್ಯರ ಮನೆಗಳಲ್ಲಿ ಕುಡಿಯಲು ನೀರನ್ನು ಲೋಟದಲ್ಲಿ ಕೊಡದೆ ಮೇಲಿಂದ ನೀರನ್ನು ಸುರಿಯುತ್ತಿದ್ದರೆಂದು ನೆನೆದು ಕಣ್ಣೀರಿಟ್ಟರೆಂಬ ವರದಿ (ಪ್ರ.ವಾ., ಅ. 31) ಓದಿ ದುಃಖ ಒತ್ತರಿಸಿತು.
ರಾಷ್ಟ್ರಕ್ಕೆ ಸ್ವಾತಂತ್ರ ಬಂದು ಆರೂವರೆ ದಶಕಗಳು ಕಳೆದರೂ ಇಂಥ ಸ್ಥಿತಿ ಪೂರ್ತಿ ನಿವಾರಣೆ ಆಗಿಲ್ಲ. ಇದು ವಿಪರ್ಯಾಸ. ಆದರೆ ‘ದಲಿತರನ್ನು ಅಪಮಾನ ಮಾಡುವ ಸಿದ್ಧಾಂತವನ್ನು ನೆಚ್ಚಿಕೊಂಡವರು ಬಿಜೆಪಿಯವರು’ ಎಂದು ಪರಮೇಶ್ವರ್‌ ಹೇಳಿರುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT