ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ನುಂಗಿದ ತಮಟೆ ಸದ್ದು

Last Updated 8 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನಾವು ಗಣಪತಿ ಹಬ್ಬಕ್ಕೆ ನೆಂಟರ ಮನೆಗೆ ಹೋಗಿ­ದ್ದೆವು. ವಿಶೇಷವೆಂದರೆ ನಾವು ನಮ್ಮ ನೆಂಟರ ಜೊತೆ ಮಾತೇ ಆಡಲಿಲ್ಲ. ಏಕೆಂದರೆ ಪರ­ಸ್ಪರ ನಾವು  ಮಾತಾಡಿದರೆ ಮಾತು ಯಾರಿಗೂ ಕೇಳುತ್ತಲೇ ಇರಲಿಲ್ಲ. ನೆಂಟರ ಮನೆಯ ರಸ್ತೆ­ಯಲ್ಲಿ ಅಂದು ಗಣೇಶನ ವಿಸರ್ಜನೆ.  ನೆಂಟರು ನಮ್ಮನ್ನು ನೋಡಿ ಮುಗುಳ್ನಕ್ಕರು. ಮಾತಾಡಲು ಪ್ರಯತ್ನಿಸಿ ಕೊನೆಗೆ ಅಸಹಾ­ಯ­ಕತೆ­ಯಿಂದ ಕೈ ಚೆಲ್ಲಿದರು.  ತಮಟೆ ಸದ್ದು ಕಿವಿತಮಟೆಯನ್ನು ಭೇದಿಸುವಂತೆ ಏಕಪ್ರಕಾರ­ವಾಗಿ ಕೇಳುತ್ತಿತ್ತು. ಕಿಟಕಿ ಮುಚ್ಚಿದರೂ  ಪ್ರಯೋಜನವಾಗಲಿಲ್ಲ.

ಹಿಂದಿನ ರಾತ್ರಿಯೂ ಹನ್ನೊಂದರವರೆಗೆ ವಾದ್ಯಗೋಷ್ಠಿ ನಡೆದಿದ್ದರಿಂದ  ಮನೆಯಲ್ಲಿರುವ ವಯಸ್ಸಾದ ತಾಯಿಯೂ ನಿದ್ದೆಗೆಡಬೇಕಾ ಯಿತು.
ಇಂಥ ಮಾಲಿನ್ಯ ನಿಯಂತ್ರಿಸಲು ಮತ್ತು ಪರಿ­ಸರ ಕಾಪಾಡಲು ನಮ್ಮಲ್ಲಿ  -ಕಾಯ್ದೆಗಳಿಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT