ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ...

Last Updated 21 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ದೇಶದ ಗಡಿ ಕಾಯುತ್ತ ಸಿಯಾಚಿನ್‌ ಪ್ರದೇಶದಲ್ಲಿ ಹುತಾತ್ಮರಾದ ಹನುಮಂತಪ್ಪ ಮತ್ತಿತರ ಸೈನಿಕರ ಸಾವಿಗೆ ಸರ್ಕಾರ ಹಾಗೂ ಸಾರ್ವಜನಿಕರು ಬೃಹತ್‌ ಪ್ರಮಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಇದು ಮಾನವೀಯತೆ. ಸ್ವಾಗತಾರ್ಹ.

ದೇಶದ ಒಳಗೆ ಸುಸಜ್ಜಿತವಾದ ಕಟ್ಟಡಗಳಲ್ಲಿ ಸುರಕ್ಷಿತವಾಗಿ ಹವಾನಿಯಂತ್ರಿತ  ಐಷಾರಾಮಿ ಕೋಣೆಗಳಲ್ಲಿ ಕುಳಿತಿರುವ ನಮ್ಮ ರಾಜಕೀಯ ನಾಯಕರು, ಅಧಿಕಾರಿಗಳು, ನೌಕರರು, ದೇಶದ ಹಿತದೃಷ್ಟಿಯಿಂದ ಭ್ರಷ್ಟಾಚಾರ ಮುಕ್ತರಾದರೆ, ಸಂಬಳಕ್ಕಲ್ಲದೆ ಗಿಂಬಳಕ್ಕೆ ನಾಲಿಗೆ ಚಾಚದೆ ಇದ್ದರೆ ಅದು ಮಹಾನ್‌ ಮಾನವೀಯತೆ ಆಗುತ್ತದೆ.

ವಕೀಲ, ಶಿಕ್ಷಕ ಮತ್ತಾವುದೇ ವೃತ್ತಿಯಾಗಿರಲಿ ಜನರನ್ನು ವಂಚಿಸದೆ, ಕಲಬೆರಕೆ ಮಾಡದೆ, ಹಣದ ದಂಧೆಯಿಂದ ದೂರವಾಗಿ, ಆತ್ಮಸಾಕ್ಷಿಯಿಂದ ತೊಡಗಿಸಿಕೊಂಡರೆ ಅದೇ ಮಾನವೀಯತೆ. ಹುತಾತ್ಮ ಸೈನಿಕರಿಗೆ ಕೊಡುವ ಶ್ರದ್ಧಾಂಜಲಿಯಂತೆ ಅದು ತಮಗೆ ತಾವೇ ಕೊಟ್ಟುಕೊಳ್ಳುವ ಶ್ರದ್ಧೆಯ ಅಂಜಲಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT