ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತವಾಗಿ ಚಿಂತಿಸಲಿ

Last Updated 3 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ­ಯಾದ ಜಾತಿ ಗಣತಿಯನ್ನು ವಿರೋಧಿಸಿ ವೀರಶೈವ ಮಹಾಸಭಾ ತೆಗೆದುಕೊಂಡಿ­ರುವ ನಿರ್ಣಯ ಆರೋಗ್ಯದಾಯಕವಾದ­ದ್ದಲ್ಲ. ಇದು ಮಹಾಸಭಾದ ಸಂಕುಚಿತ ದೃಷ್ಟಿಯನ್ನು ಸಾರಿ ಹೇಳುತ್ತಿರುವಂತಿದೆ. ಈ ಕಿರು ಸಂದಿನ ನೋಟವನ್ನು ವಿಸ್ತರಿಸಿಕೊಂಡು ನೋಡಿದಾಗ ಮಾತ್ರ ಜಾತಿಗಣತಿಯ ಪ್ರಾಮುಖ್ಯ ಎಷ್ಟೆಂದು ಅದಕ್ಕೆ ಮನವರಿಕೆ­ಯಾದೀತು. ಜಾತಿಯ ಇಕ್ಕಟ್ಟಿನಲ್ಲಿ ಕುಳಿತವರಿಗೆ ಈ ಸೂಕ್ಷ್ಮಗಳು ತಿಳಿಯುವುದು ಕಷ್ಟ.

ಲಿಂಗಾಯತ ಜಾತಿಯ ವಿವಿಧ ಉಪ ಪಂಗಡಗಳ ಜನರು ತಮ್ಮ ಉಪ ಪಂಗಡ­ಗಳ ಹೆಸರನ್ನೇ ನಮೂದಿಸಬಹುದು, ಇದರಿಂದ ಸಮುದಾಯದ ಜನಸಂಖ್ಯೆ ಕಡಿಮೆ ಇರುವಂತೆ ವರದಿಯಲ್ಲಿ ದಾಖ­ಲಾಗ­ಬಹುದು ಎಂಬ ಮಹಾಸಭಾದ ಆತಂಕದಲ್ಲಿ ಹುರುಳಿಲ್ಲ. ಒಂದು ವೇಳೆ  ಆ ಸಮುದಾಯದವರು ಹಾಗೆ ನಮೂದಿ­ಸಿ­ದರೂ; ಉದಾಹರಣೆಗೆ ಅವರು ಲಿಂಗಾಯತ/ ಗಾಣಿಗ, ಲಿಂಗಾಯತ/ ಸಿಂಪಿಗ, ಲಿಂಗಾಯತ/ಪಂಚಮಸಾಲಿ ಇತ್ಯಾದಿ ಬರೆಸಿದರೂ ಆತಂಕಪಡುವ ಅಗತ್ಯವೇನೂ ಇರಲಾರದು.

ಅವರು ಲಿಂಗಾಯತ ಅಲ್ಪಸಂಖಾತ­ರೆಂದು ಮುಂದೆ ಪರಿಗಣಿತರಾಗಿ ಮೀಸಲು ಸೌಲಭ್ಯಕ್ಕೂ ಅರ್ಹರಾಗಬಹುದಲ್ಲವೇ? ಇಂಥ ಯಾವುದೇ ಆಲೋಚನೆಯಿಲ್ಲದೆ ಮಹಾಸಭಾ ಸಾರಾಸಗಟು ನಿರ್ಣಯ ತೆಗೆದುಕೊಳ್ಳುವುದು ವೀರಶೈವ ತಾತ್ವಿ­ಕತೆಯ ಬಗೆಗಿನ ಅದರ ಅಜ್ಞಾನವನ್ನು ತೋರು­ತ್ತದಲ್ಲದೆ ಬೇರೇನೂ ಅಲ್ಲ.

ಈಗಿರುವ ಲಿಂಗಾಯತರೆಲ್ಲರೂ ಬಸವಣ್ಣನಿಗೂ ಮುಂಚೆ ತಳಸಮು­ದಾಯದ ಕಸುಬುದಾರರಾಗಿದ್ದರು ಎಂಬ ಸರಳ ತಿಳಿವಳಿಕೆ ಮಹಾಸಭಾಕ್ಕೆ ಇದ್ದರೆ ಸಾಕು ತನ್ನ ಈಗಿನ ತೀರ್ಮಾನವನ್ನು ಬದಲಿಸಿಕೊಂಡು ಜಾತಿಗಣತಿ ಸರಾಗವಾಗಿ ನಡೆಯಲು ಅನುವು ಮಾಡಿಕೊಡಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT