ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲೇ ಎಚ್ಚರಗೊಳ್ಳಿ

ಅಕ್ಷರ ಗಾತ್ರ

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂಗಾರಿನಲ್ಲಿ ಹೆಚ್ಚು ಮಳೆ ಬೀಳುತ್ತದೆ.   ತೀವ್ರ ಮಳೆಗಾಳಿ, ನೆರೆಹಾವಳಿ, ಮರಗಳ ಪಲ್ಲಟ, ಸಂಚಾರದ ಸಮಸ್ಯೆಯಿಂದಾಗಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ತೊಂದರೆಯಾಗುತ್ತದೆ.  ಬೇಸಿಗೆಯಲ್ಲಿ ನೀಡುವ ರಜೆಯನ್ನು ರದ್ದುಮಾಡಿ ಅದನ್ನೇ ಮಳೆಗಾಲದಲ್ಲಿ ನೀಡಿದರೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಸಿಗುತ್ತದೆ.

ಇದಲ್ಲದೇ ಮಳೆಗಾಲ ಆರಂಭವಾಗುವ ಒಂದು ತಿಂಗಳ ಮುಂಚೆಯೇ ವಿದ್ಯುತ್ ಹಾಗೂ ದೂರವಾಣಿ ತಂತಿಗಳು ಹಾದುಹೋಗುವ ಕಡೆ ಆಯಾ ಇಲಾಖೆಗಳು  ಸಂಪರ್ಕಕ್ಕೆ ತೊಂದರೆ ಆಗಬಹುದಾದ ಮರಗಿಡಗಳು ಹಾಗೂ ಶಿಥಿಲ ವೃಕ್ಷಗಳನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಆಗ ಮುಂದೆ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT