ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಗೀಳು

Last Updated 17 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಹೆಸರಾಂತ ಗಣಪತಿ ದೇವಸ್ಥಾನ­ವೊಂದಕ್ಕೆ ಹೋಗಿದ್ದೆ. ಸಂಕಷ್ಟಹರ ದಿನವಾ­ದು­ದರಿಂದ ಎಲ್ಲಿ ಕಂಡರೂ ಜನವೋ ಜನ. ಕಷ್ಟ­ಪಟ್ಟು ದೇವಸ್ಥಾನ ಪ್ರವೇಶಿಸಿದರೆ ಸರತಿ ಸಾಲು ಮುಂದಕ್ಕೇ ಹೋಗುತ್ತಿಲ್ಲ. ಕಾರಣ ಎಲ್ಲರ ಮೊಬೈಲ್‌ ಗೀಳು.

ಒಳಸುತ್ತಿನ ಜಗಲಿಯಲ್ಲಿ ಕೂತು ಕಾಲು ಕೆಳಬಿಟ್ಟು ಮೊಬೈಲ್‌ನಲ್ಲಿ ಹರ­ಟು­ವವರು ಕೆಲವರಾದರೆ ಪ್ರದಕ್ಷಿಣೆ ಹಾಕುತ್ತ ಮೊಬೈಲ್‌ನಲ್ಲಿ ಬೊಬ್ಬೆ ಹೊಡೆಯುವವರು ಹೆಚ್ಚಿನವರು. ಗರ್ಭ­ಗುಡಿಯ ಸುತ್ತ ಮೊಬೈಲ್‌ ವಾತಾ­ವರಣ. ಭಕ್ತನ ಮೊರೆ  ದೇವರಿಗೂ ಕೇಳಿಸದ ಪರಿಸ್ಥಿತಿ.

ಮೊಬೈಲ್‌ ನಿಶ್ಶಬ್ದವಾಗಿಡಿ ಎಂದು ಅಲ್ಲಲ್ಲಿ ಫಲಕ ಹಾಕಿದ್ದರೂ, ದೇವರ ದರ್ಶನಕ್ಕಾಗಿ ಬಂದಿ­ದ್ದರೂ, ಇತರ ಭಕ್ತಾದಿಗಳಿಗೆ ತೊಂದರೆ­ಯಾಗುತ್ತದೆ ಎಂದು ಗೊತ್ತಿದ್ದರೂ ಕೆಲ ನಿಮಿಷ­ಗಳ ಮಟ್ಟಿಗಾದರೂ ಮೊಬೈಲ್‌ಗೆ ರೆಸ್ಟ್ ಕೊಡಬಾರದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT