ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ: ‘ವಿಳಂಬ’ ಜ್ಞಾನೋದಯ

Last Updated 22 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಗುಜರಾತಿನ ರಾಜ್‌ಕೋಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರು ಮೋದಿ ಅವ­ರದ್ದೇ ಹೆಸರಿನಲ್ಲಿ ದೇವಾಲಯವೊಂದನ್ನು ನಿರ್ಮಿಸಿ­ದ್ದರು.  ಮೋದಿಯವರು ಇದಕ್ಕೆ ತಮ್ಮ ಅಸ­ಮಾ­ಧಾನ ವ್ಯಕ್ತಪಡಿಸಿದ ಮೇಲೆ ಅಲ್ಲಿನ ಜಿಲ್ಲಾಡಳಿತ  ಈಗ ಮಂದಿರವನ್ನು ತೆರವುಗೊ­ಳಿ­ಸಿದೆ. ಮೋದಿಯವರು ಬಹುಕಾಲ ಮುಖ್ಯಮಂತ್ರಿ ಯಾಗಿದ್ದ ರಾಜ್ಯದಲ್ಲಿ ಅವರಿಗೆ ಒಂದು ದೇವಾ­ಲಯ ಕಟ್ಟಿಸುವ ವರದಿಗಳು ಗುಪ್ತಚರ ದಳದ ಮೂಲಕ ಅವರಿಗೆ ಮೊದಲೇ ಬಂದಿರುತ್ತವೆ.

ಆದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರ ಪಕ್ಷ ಹೀನಾಯ ಸೋಲನ್ನು ಉಂಡಮೇಲೆ, ಅವರು ಈ ದೇವಾಲಯ ನಿರ್ಮಿ­ಸಿರುವುದರ ಬಗ್ಗೆ ಅಸಮಾಧಾನ ಹಾಗೂ ಆಘಾತ­ಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿ­ಯಲ್ಲಿ ಇಂಥದಕ್ಕೆ ಅವಕಾಶ ಇಲ್ಲವೆಂದೂ ಹೇಳಿದ್ದಾರೆ. ಅವರಿಗೆ ಈ ಕುರಿತು ತಡವಾಗಿ­ಯಾದರೂ ಜ್ಞಾನೋದಯವಾಗಿರುವುದು ಸಮಾ­ಧಾನದ ವಿಷಯ. ಇಲ್ಲಿವರೆಗೆ ‘ಕಣ್ಣು’, ‘ಕಿವಿ’ ಗಳನ್ನು ಮುಚ್ಚಿಕೊಂಡಿದ್ದ ರಾಜ್‌ಕೋಟ್‌ ಜಿಲ್ಲಾಡಳಿತವು ಬಹುಶಃ  ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಈಗ ಏನೋ ಸಬೂಬು ಹೇಳಿ, ಮೋದಿಯವರ ದೇವಾಲಯವನ್ನು ತೆಗೆಸಿದೆ. ಪ್ರಧಾನಿಯಾದವರಿಗೆ ಇಂಥ ‘ವಿಳಂಬ ಜ್ಞಾನೋದಯ’ ತರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT