ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರದೋ ದುಡ್ಡು...

Last Updated 7 ಜುಲೈ 2016, 19:30 IST
ಅಕ್ಷರ ಗಾತ್ರ

‘45 ನಿಮಿಷದ ಯೋಗಕ್ಕೆ ₹ 45 ಲಕ್ಷ!’ ಸುದ್ದಿ (ಪ್ರ.ವಾ., ಜುಲೈ 7) ಓದಿ ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆ ನೆನಪಾಯಿತು.
ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ  ಖಜಾನೆ ಲೂಟಿಯ ಉದ್ದೇಶ ಹೊಂದಿರುವಂಥವೇ ಹೆಚ್ಚು  ಎಂಬುದು ಬಹುಜನರಿಗೆ ಗೊತ್ತು.

ಆದರೆ ಈಗ ಈ ಸಾಲಿಗೆ ಸರ್ಕಾರ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿ ಹೋಗುತ್ತಿರುವುದಕ್ಕೆ ಏನೆನ್ನಬೇಕು? ಅದೂ ಯೋಗ ಪ್ರಚುರಪಡಿಸುವಂಥ ಕಾರ್ಯಕ್ರಮಗಳು. ಜೂನ್ 21ರಂದು ಆಯೋಜಿಸಲಾಗಿದ್ದ ಆ ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ಜನ ನೋಡಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚವಾಗುವಂತಹದ್ದು ಅಲ್ಲೇನಿತ್ತು? ಸರ್ಕಾರ ಇನ್ನು ಮುಂದಾದರೂ ದುಡ್ಡು ಕೊಟ್ಟು ಮಾಡಿಕೊಳ್ಳುವ ಇಂಥ  ಸಹಯೋಗಗಳನ್ನು ನಿಲ್ಲಿಸಬೇಕು. ಸಾಮಾನ್ಯ ಜನರಿಗೆ ಚಿಕ್ಕಾಸಿನ ಪ್ರಯೋಜನವೂ ಇಲ್ಲದ, ಸರ್ಕಾರದ ಬೊಕ್ಕಸಕ್ಕೆ ಭಾರಿ ತೂತು ಕೊರೆಯುವ ಕಾರ್ಯಕ್ರಮಗಳಿಂದ ಯಾರಿಗೂ ಲಾಭವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT