ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದಕ್ಕೆ ‘ಆಧಾರ’?

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಆಸ್ತಿ ವಹಿವಾಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಇಲ್ಲ’ ಎಂಬುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ (ಪ್ರ.ವಾ., ಡಿ.20). ‘ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವುದರಿಂದ, ವ್ಯಕ್ತಿಯ ಆಸ್ತಿಪಾಸ್ತಿಯ ಸಂಪೂರ್ಣ ವಿವರ ಸರ್ಕಾರದ ಬೆರಳಂಚಿನಲ್ಲಿರುತ್ತದೆ. ಇದರಿಂದಾಗಿ ಕಳ್ಳ ವ್ಯವಹಾರಗಳಿಗೆ ಮತ್ತು ಕಪ್ಪು ಹಣದ ಬಳಕೆಗೆ ಕಡಿವಾಣ ಬೀಳುತ್ತದೆ’ ಎಂಬ ಶ್ರೀಸಾಮಾನ್ಯನ ನಂಬಿಕೆಯನ್ನು, ಕೇಂದ್ರ ಸರ್ಕಾರದ ಈ ಸ್ಪಷ್ಟನೆಯು ಬುಡ ಸಮೇತ ಕಿತ್ತೆಸೆದಿದೆ.

ಹಾಗಾದರೆ, ಈ ‘ಆಧಾರ್’ ಯಾವುದಕ್ಕೆ ಬೇಕಾಗಿದೆ? ಸಾಮಾನ್ಯ ಜನರು ಬ್ಯಾಂಕ್‌ನಲ್ಲಿ ಸಣ್ಣ ಉಳಿತಾಯ ಖಾತೆ ತೆರೆಯಲು ಆಧಾರ್ ಬೇಕು, ಅಡುಗೆ ಅನಿಲ ಸಂಪರ್ಕ ಪಡೆಯಲು ಆಧಾರ್ ಬೇಕು, ಮೊಬೈಲ್ ಫೋನ್‌ಗೆ ಆಧಾರ್ ಬೇಕು... ಹೀಗೆ ಶ್ರೀಸಾಮಾನ್ಯನ ಎಲ್ಲ ಜುಜುಬಿ ಕೆಲಸಗಳಿಗೂ ಆಧಾರ್ ಬೇಕು. ಆದರೆ, ಧನವಂತರ ಆಸ್ತಿ ವ್ಯವಹಾರಗಳಿಗೆ ಬೇಕಾಗಿಲ್ಲ, ಜನಗಣತಿ ಸಂದರ್ಭದಲ್ಲಿ ಆಧಾರ್ ಬೇಕಾಗಿಲ್ಲ. ಮತದಾನಕ್ಕೆ ಆಧಾರ್ ಕಡ್ಡಾಯವಲ್ಲ. ಮೇಲಾಗಿ, ನೆರೆ ರಾಷ್ಟ್ರಗಳಿಂದ ಕಳ್ಳ ಹಾದಿಯಲ್ಲಿ ನಮ್ಮ ದೇಶದೊಳಗೆ ನುಸುಳುವ ಸಾವಿರಾರು ಜನರಿಗೆ ಆಧಾರ್ ಬಹಳ ಸುಲಭವಾಗಿ ಲಭಿಸುತ್ತದೆ.

ಪರಿಸ್ಥಿತಿ ಹೀಗಿರುವಾಗ, ನಮಗೆ ‘ಒಳ್ಳೆಯ ದಿನಗಳು’ ಬರುತ್ತವೆ ಎಂದು ನಂಬುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT